ಅತಿ ಪವಿತ್ರವಾದುದು ಹರಿಕಥಾಮೃತ: ಶ್ರೀ ಸತ್ಯಾತ್ಮತೀರ್ಥರು
ಹಂಚಿಕೊಳ್ಳಿಧಾರವಾಡಭೂಮಿಯಲ್ಲಿ ಅತ್ಯಂತ ಪವಿತ್ರವಾದುದು ಹರಿಕಥಾಮೃತ. ಭಗವಂತನ ಮಹಿಮೆ ಹಾಗೂ ಲೀಲೆಗಳನ್ನು ಶ್ರದ್ಧೆಯಿಂದ ಆಲಿಸುವ ಮೂಲಕ ಆಧ್ಯಾತ್ಮಿಕ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು. ಧಾರವಾಡದ ಉತ್ತರಾದಿ ಮಠದ ನೂತನ ಕಟ್ಟಡದ ಆವರಣದಲ್ಲಿ 31ನೇ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿರುವ ಶ್ರೀ ಸತ್ಯಾತ್ಮತೀರ್ಥರು, 46ನೇ ದಿನದ ಆಶೀರ್ವಚನದಲ್ಲಿ ಮಾತನಾಡಿದರು. ಪರೀಕ್ಷಿತ ಮಹಾರಾಜರು ಸೂರ್ಯವಂಶದ ರಾಜರ ಕಥೆಗಳನ್ನು ಆಲಿಸಿದಂತೆ, ಭಗವಂತನ ಕಥೆಗಳನ್ನು ಶ್ರದ್ಧೆ ಮತ್ತು ಉತ್ಸಾಹದಿಂದ ಕೇಳಬೇಕು. ಶ್ರೀರಾಮಚಂದ್ರನು ತನ್ನ ದರ್ಶನದಿಂದ ಅಹಲ್ಯೆಯನ್ನು ಉದ್ಧರಿಸಿದನು. ರಾವಣನಿಂದ ಸೀತಾದೇವಿಯನ್ನು…
