ಗಾಂಧೀಜಿ ತತ್ವಗಳ ಬಗ್ಗೆ ಜಾಗೃತಿ ಅಗತ್ಯ
ಧಾರವಾಡಗಾಂಧೀಜಿಯವರದ್ದು ಮಾದರಿ ವ್ಯಕ್ತಿತ್ವ. ಅವರ ಆದರ್ಶತೆ ಹಾಗೂ ತತ್ವಗಳ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಶ್ರೀ ಸಾಯಿ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಡಾ. ವೀಣಾ ಬಿರಾದಾರ ಹೇಳಿದರು. ನಗರದ ಸಿದ್ದವೀರ್ ಸತ್ಸಂಗ ಮತ್ತು ಬಾಸೆಲ್ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ನಡೆದ ಗಾಂಧೀಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗಾಂಧೀಜಿ ಮನುಕುಲದ ಅಸ್ಮಿತೆ. ನಾವು ಶಿಕ್ಷಕರಾಗಬಹುದು, ಸಾಹಿತಿ ಅಗಬಹುದು, ರಾಜಕಾರಣಿ ಆಗಬಹುದು, ಅಧಿಕಾರಿ ಆಗಬಹುದು, ಆದರೆ ಗಾಂಧೀಜಿ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು….
