ರಾಜ್ಯ ರಣಜಿ ತಂಡದಲ್ಲಿ ‘ಕಾರವಾರ ಹುಡುಗ’ ರಿತೇಶ ಭಟ್ಕಳ

ಧಾರವಾಡಹೊಸ ಋತುವಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಕಾರವಾರ ಹುಡುಗ’ ಆಫ್-ಸ್ಪಿನ್ನಿಂಗ್ ಆಲ್‌ರೌಂಡರ್ ರಿತೇಶ್ ಭಟ್ಕಳ್ ಕೊನೆಗೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಉತ್ಕಷ್ಟ ಪ್ರದರ್ಶನ ನೀಡುತ್ತಾ ಬಂದಿದ್ದರೂ ಆಯ್ಕೆದಾರರ ಅವಕೃಪೆಗೆ ಒಳಗಾಗಿದ್ದ ರಿತೇಶ ಭಟ್ಕಳ್ ಅವರಿಗೆ ಕೊನೆಗೂ ಹಸಿರು ನಿಶಾನೆ ದೊರಕಿದೆ. ಕಾರವಾರದಲ್ಲಿ ಹುಟ್ಟಿ ಬೆಳೆದ ರಿತೇಶ, ತಮ್ಮ ಕ್ರಿಕೆಟ್ ಜೀವನ ಆರಂಭಿಸಿದ್ದು ಧಾರವಾಡದ ವಸಂತ ಮುರ್ಡೆಶ್ವರ ಕ್ರಿಕೆಟ್ ಅಕಾಡೆಮಿ(ವಿ.ಎಂ.ಸಿ.ಎ.)ಯಿಂದ ಎನ್ನುವುದು ಗಮನಾರ್ಹ. ೧೪, ೧೬ ಹಾಗೂ ೧೯ ವಯೋಮಿತಿ…

Read More

ಏಷ್ಯನ್ ಗೇಮ್ಸ್ ಪುರುಷರ ಹಾಕಿ: ಬಂಗಾರದ ಬೇಟೆಗೆ ಹರ್ಮನ್ ಪಡೆ

ಕಾಕಮಿಗಹರಾ(ಜಪಾನ)ಅಂತಿಮ ಕ್ಷಣದವರೆಗೂ ನಡೆದ ರೋಚಕ ಹಣಾಹಣಿಯಲ್ಲಿ ಕಟು ವೈರಿ ಪಾಕಿಸ್ತಾನಕ್ಕೆ ೪-೩ ಗೋಲುಗಳ ಸೋಲಿನ ಶಾಕ್’ ನೀಡಿದ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಗಿಫು ಪ್ರಿಫೆಕ್ಚರಲ್ ಗ್ರೀನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಸಾಧಿಸಿದ ಈ ಸ್ಮರಣೀಯ ಗೆಲುವಿನೊಂದಿಗೆ ಭಾರತ, ದಿನಾಂಕ ೩ ರಂದು ನಡೆಯುವ ಬಂಗಾರದ ಬೇಟೆ’ಗೆ ಅರ್ಹತೆ ಗಳಿಸಿಕೊಂಡಿತಲ್ಲದೇ, ೨೦೨೮ರ ಲಾಸ್ ಏಂಜೆಲ್ಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಸಂಪಾದಿಸಿಕೊಳ್ಳುವುದರಿಂದ ಇನ್ನೊಂದೇ…

Read More

ಹಣ, ಜಾತಿ ಮತ್ತು ಮದ್ಯದ ಪ್ರಭಾವದಿಂದ ಪ್ರಾಮಾಣಿಕರು, ಬಡವರು ರಾಜಕೀಯ ಪ್ರವೇಶಿಸುವುದು ಕಷ್ಟ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ

ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಜಾರಿಗೆ ಬರಲಿ; ಎಲ್ಲ ರಾಜಕೀಯ ಪಕ್ಷಗಳ ನಡುವೆ ಮುಕ್ತ ಚರ್ಚೆಯಾಗಲಿ ಬೆಂಗಳೂರುಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ಆಗದಿದ್ದರೆ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯವಿಲ್ಲ. ಇಂದಿನ ಚುನಾವಣೆಯಲ್ಲಿ ಹಣ, ಜಾತಿ ಮತ್ತು ಮದ್ಯದ ಪ್ರಭಾವ ಹೆಚ್ಚಾಗಿದ್ದು, ಪ್ರಾಮಾಣಿಕರು, ಬಡವರು, ಬುದ್ಧಿವಂತರು ಹಾಗೂ ಸಮಾಜ ಸೇವೆಯ ಆಶಯ ಹೊಂದಿರುವವರು ರಾಜಕೀಯ ಪ್ರವೇಶಿಸುವುದೇ ಕಷ್ಟವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಜೆ.ಎಚ್. ಪಟೇಲ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸ್ಮರಣೋತ್ಸವ…

Read More

ರಂಭಾಪುರಿ ಜಗದ್ಗುರುಗಳ ಅಕ್ಟೋಬರ್ ಪ್ರವಾಸ

ರಂಭಾಪುರಿ ಪೀಠ(ಬಾಳೆಹೊನ್ನೂರು)ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 2026-ಅಕ್ಟೋಬರ್ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತೆ ಇರುತ್ತದೆ ಎಂದು ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ ತಿಳಿಸಿದ್ದಾರೆ. ದಿ. 2ರಂದು ರೋಣದಲ್ಲಿ ಗುರುಕುಲ ಪ್ರಾರಂಭೋತ್ಸವ ಸಮಾರಂಭ, ದಿ. 3ರಂದು ರೋಣ ತಾಲೂಕ ಅಬ್ಬಿಗೇರಿ ಗ್ರಾಮದಲ್ಲಿ ಲಿಂ. ಸೋಮಶೇಖರ ಶ್ರೀಗಳವರ ಪುಣ್ಯ ಸ್ಮರಣೋತ್ಸವ ಸಮಾರಂಭ, ದಿ. 5ರಂದು ಯಲಬುರ್ಗಾ ತಾಲೂಕ ಕಲ್ಲೂರು ಗ್ರಾಮದಲ್ಲಿ ಹಿರೇಮಠದ ನೂತನ ಕಟ್ಟಡ ಉದ್ಘಾಟನಾ ಧರ್ಮ ಸಮಾರಂಭ, ದಿ….

Read More

ಎ.ಐ.ಟಿ.ಎ. ಜ್ಯೂನಿಯರ್ ಟೆನಿಸ್: ಅನ್ವಿ, ಲೂಸಿಕಾ ಸೆಮಿಫೈನಲ್‌ಗೆ

ಧಾರವಾಡಸ್ಥಳೀಯ ಪ್ರತಿಭೆಗಳಾದ ಅನ್ವಿ ಹೊಂಡಪ್ಪನವರ ಹಾಗೂ ಲೂಸಿಕಾ ಬಂಡಿಕೇರಿ ಇಲ್ಲಿ ನಡೆದಿರುವ ಆಲ್-ಇಂಡಿಯಾ ಟೆನಿಸ್ ಅಸೋಸಿಯೇಷನ್(ಎ.ಐ.ಟಿ.ಎ.) ಚಾಂಪಿಯನ್‌ಷಿಪ್ ಸಿರೀಸ್-೭(ಸಿ.ಎಸ್.೭) ಟೂರ್ನಿಯಲ್ಲಿ ೧೪ ವರ್ಷದವರೊಳಗಿನ ಬಾಲಕಿಯರ ಸಿಂಗಲ್ಸ್ ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ. ಇಲ್ಲಿಯ ರಾಜಾಧ್ಯಕ್ಷ ಪೆವಿಲಿಯನ್‌ನಲ್ಲಿ ಬುಧವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ನಗರದ ಪವನ ಆಂಗ್ಲ ಮಾಧ್ಯಮ ಶಾಲೆಯ ೬ನೇ ತರಗತಿಯ ವಿದ್ಯಾರ್ಥಿನಿ ಅನ್ವಿ ಅಭಿಷೇಕ ಹೊಂಡಪ್ಪನವರ ಇನ್ನೋರ್ವ ಪ್ರತಿಭಾನ್ವಿತ ಆಟಗಾರ್ತಿ ಹುಬ್ಬಳ್ಳಿಯ ಶ್ರೀ ವಿದ್ಯಾ ರಾಘವೇಂದ್ರ ಆಂಗ್ಲ ಮಾಧ್ಯಮ ಶಾಲೆಯ ೮ನೇ ತರಗತಿಯಲ್ಲಿ ಓದುತ್ತಿರುವ ರಿತಿಷಾ ಬರಡೂರ ಎದುರು…

Read More

ರಾಜ್ಯ ೧೯ ವರ್ಷದವರೊಳಗಿನ ತಂಡಕ್ಕೆ ಅನ್ವಯ್ ನಾಯಕ, ಧಾರವಾಡದ ಸುಜಯ ಕೊರವರಗೂ ಸ್ಥಾನ

ಬೆಂಗಳೂರುವಿಶಾಖಪಟ್ಟಣದಲ್ಲಿ ಅಕ್ಟೋಬರ್ ೮ ರಿಂದ ೧೬ರವರೆಗೆ ನಡೆಯಲಿರುವ ೧೯ ವರ್ಷದವರೊಳಗಿನ ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲಿರುವ ಕರ್ನಾಟಕ ರಾಜ್ಯ ತಂಡಕ್ಕೆ ಕ್ರಿಕೆಟ್‌ನ ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ನಾಯಕರಾಗಿರುತ್ತಾರೆ. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ್ ಬುಧವಾರ ಪ್ರಕಟಿಸಿರುವ ೧೫ ಆಟಗಾರರ ಪಟ್ಟಿಯಲ್ಲಿ ಸದ್ಯ ಬೆಂಗಳೂರಿನ ರಾಹುಲ್ ದ್ರಾವಿಡ್‌ರ ಸಿಕ್ಸ್ ಕ್ರಿಕೆಟ್ ಅಕಾಡೆಮಿ’ಯಲ್ಲಿ ತರಬೇತಿ ಪಡೆಯುತ್ತಿರುವ ಧಾರವಾಡದ ಪ್ರತಿಭಾನ್ವಿತ ಪ್ರಾರಂಭಿಕ ಬ್ಯಾಟರ್ ಸುಜಯ ಬಸವರಾಜ ಕೊರವರ ಅವರೂ ಸ್ಥಾನ ಗಿಟ್ಟಿಸಿರುವುದು…

Read More

ಏಷ್ಯನ್ ಗೇಮ್ಸ್-೨೦೨೬: ಭಾರತಕ್ಕೆ ೧೦ನೇ ಚಿನ್ನದ ಪದಕ

ನಾಗೋಯಾಉತ್ಕೃಷ್ಟ ಪ್ರದರ್ಶನ ನೀಡಿದ ಭಾರತದ ಕ್ರೀಡಾಪಟುಗಳು ಬುಧವಾರ ಮುಂಜಾನೆ ಮತ್ತೆ ನಾಲ್ಕು ಚಿನ್ನದ ಪದಕಗಳಿಗೆ ಲಗ್ಗೆ ಹಾಕುವುದರೊಂದಿಗೆ ನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಗಳಿಸಿದ ಚಿನ್ನದ ಪದಕಗಳ ಸಂಖ್ಯೆ ಹತ್ತಕ್ಕೆ ಏರಿದೆ. ಪ್ರತಿಯೊಂದು ಸಲವೂ `ಬುಲ್ಸ್ ಐಸ್’ಗೆ ಗುರಿಯಿಟ್ಟ ಸಾಹಿಲ್ ಜಾಧವ, ಗಣೇಶ ಮಣಿರತ್ನಮ್ ಟಿ. ಹಾಗೂ ಕುಶಾಲ ದಲಾಲ ಅವರಿಂದ ಕೂಡಿದ್ದ ಭಾರತದ ತಂಡ ಪುರುಷರ ಬಿಲ್ಗಾರಿಕೆ ಕಂಪೌಂಡ್ ಟೀಂ ಸ್ಪರ್ಧೆಯಲ್ಲಿ ಚೀನಾ ತಂಡವನ್ನು(೨೩೮-೨೩೯) ಒಂದೇ ಒಂದು ಪಾಯಿಂಟ್‌ನಿಂದ ಪರಾಭವಗೊಳಿಸಿ ಚಿನ್ನದ ಪದಕಕ್ಕೆ…

Read More

ಶಿಸ್ತು, ಸಮಯ ಪಾಲನೆಯಿಂದ ಕೃಷಿ ಲಾಭದಾಯಕ

ಕಲಘಟಗಿಕೃಷಿಯಲ್ಲಿ ಶಿಸ್ತು, ಸಮಯ ಪಾಲನೆ ಅಳವಡಿಸಿಕೊಳ್ಳುವುದರಿಂದ ಲಾಭ ಸಾಧ್ಯ ಎಂದು ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ಮಂಜಯ್ಯ ಅಣ್ಣಿಗೇರಿ ಹೇಳಿದರು. ಧಾರವಾಡ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಬುಧವಾರ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೃಷಿಯನ್ನು ಒಂದು ನೌಕರಿಯಂತೆ ಪರಿಗಣಿಸಿ ಶಿಸ್ತು ಅಳವಡಿಸಕೊಂಡು ಸಮಯ ವ್ಯರ್ಥ ಮಾಡದೆ ಕಾಯಕ ನಿರ್ವಹಿಸಿದರೆ ಆದಾಯ ಗಳಿಸಬಹುದು ಎಂದರು. ಕೇವಲ ಒಂದೇ ಬೆಳೆಯನ್ನು ನಂಬಿಕೊಂಡು ಕುಳಿತುಕೊಳ್ಳುವ ಬದಲು ಸಮಗ್ರ ಕೃಷಿ ಪದ್ಧತಿ…

Read More

ಕಬ್ಬು ಬೆಳೆಗಾರರೇ ತಪ್ಪದೇ ಗಮನಿಸಿ

ಧಾರವಾಡ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಹಾಯಧನ ಪಾವತಿಸಲು ಕ್ರಮ: ಜಿಲ್ಲಾಧಿಕಾರಿ ಸ್ನೇಹಲ್. ಆರ್ ಧಾರವಾಡಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ನೀಡಲಾಗುವ ಸಹಾಯಧನದ ಹಣವನ್ನು ಪಾವತಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಹೇಳಿದರು. ಬುಧವಾರ ಸಂಜೆ ಜಿಲ್ಲಾಧಿಕಾರಿ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಹಾಯಧನ ಹಣವನ್ನು ಪಾವತಿ ಕುರಿತು ಮಾತನಾಡಿದರು. ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ಪ್ರತಿ ಟನ್‍ಗೆ ರೂ….

Read More

ಸಂಸ್ಕಾರಹೀನ ವಿಕೃತಿಗೆ ಸಭ್ಯ ಸಮಾಜದಲ್ಲಿ ಜಾಗವಿಲ್ಲ

ಶಶಿಕಾಂತ ಗುರೂಜಿ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ ಬಂಧಿಸಿ: ಜಯತೀರ್ಥ ಕಟ್ಟಿ ಹುಬ್ಬಳ್ಳಿಹುಬ್ಬಳ್ಳಿಯಲ್ಲಿ ನಿನ್ನೆ ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆಯ ಪವಿತ್ರ ವೇದಿಕೆಯನ್ನು ತನ್ನ ವಿಕೃತ ರಾಜಕೀಯ ಅಜೆಂಡಾಕ್ಕೆ ಬಳಸಿಕೊಂಡ ಶಶಿಕಾಂತ ಗುರೂಜಿ ಎಂಬ ಮುಖವಾಡಧಾರಿ, ದೇಶದ ಗೌರವಾನ್ವಿತ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ವಿರುದ್ಧ ಬಳಸಿರುವ ಅತ್ಯಂತ ನೀಚ, ಕೀಳುಮಟ್ಟದ ಹಾಗೂ ಗೂಂಡಾ ಸಂಸ್ಕೃತಿಯ ಭಾಷೆ ಇಡೀ ಮಾನವಕುಲವೇ ತಲೆತಗ್ಗಿಸುವಂತಿದೆ ಎಂದು ಭಾರತೀಯ ಜನತಾ ಪಕ್ಷದ ಧಾರವಾಡ ವಿಭಾಗ ಪ್ರಭಾರಿ ಜಯತೀರ್ಥ ಕಟ್ಟಿ ತೀವ್ರ…

Read More