ಏಷ್ಯನ್ ಗೇಮ್ಸ್: ಕೊನೆಗೂ ಬಂತು ಐದನೇ ಚಿನ್ನ, ಟ್ರ್ಯಾಪ್ ಶೂಟಿಂಗ್‌ನಲ್ಲಿ ನೀರು ಧಾಂಡಾ ಹೊಸ ಏಷ್ಯನ್ ದಾಖಲೆ
ನಾಗೋಯಾಪುರುಷರ ಕಬಡ್ಡಿಯಲ್ಲಿಯ ಚಿನ್ನದ ಪದಕದ ಬಳಿಕ ನಾಗೋಯಾ ಎಷ್ಯನ್ ಕ್ರೀಡಾ ಕೂಟದಲ್ಲಿ `ಹೊನ್ನಿನ ಬರ’ ಎದುರಿಸುತ್ತಿದ್ದ ಭಾರತಕ್ಕೆ ಕೊನೆಗೂ ಟ್ರ್ಯಾಪ್ ಶೂಟರ್ ನೀರು ಧಾಂಡಾ ಬಂಗಾರ ಗೆದ್ದು ಕೊಟ್ಟು ಆ ಬರ ನೀಗಿಸಿಕೊಟ್ಟಿದ್ದಾರೆ. ಮಂಗಳವಾರ ಐಚಿ ಜನರಲ್ ಶೂಟಿಂಗ್ ಗ್ಯಾಲರಿಯಲ್ಲಿ ನಡೆದ ಮಹಿಳೆಯರ ಟ್ರ್ಯಾಪ್ ಶೂಟಿಂಗ್ ಫೈನಲ್‌ನಲ್ಲಿ ನೀರು ಧಾಂಡಾ ಹೊಸ ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ೧೧೮ ಪಾಯಿಂಟ್‌ಗಳೋಡನೆ ಅಗ್ರ ಸ್ಥಾನ ಸಂಪಾದಿಸಿದ್ದ ನೀರು, ಫೈನಲ್ಸ್ನಲ್ಲಿ ೨೮ ಪಾಯಿಂಟ್ಸಳೊಂದಿಗೆ ಏಷ್ಯನ್ ದಾಖಲೆ…
