ಸಂಸಾರ ಸಾಗರ ದಾಟಲು ಪರಮಾತ್ಮನ ಪಾದವೇ ಆಶ್ರಯ

ಧಾರವಾಡ: ಭಗವಂತನನ್ನು ಭಕ್ತಿಯಿಂದ ಸ್ಮರಿಸುವುದರ ಜೊತೆಗೆ ದೇಹ, ಮನಸ್ಸು ಹಾಗೂ ಮಾತಿನಿಂದ ವಿನಮ್ರವಾಗಿ ದೇವರ ಸೇವೆ ಮಾಡಬೇಕು. ನಾವು ಮಾಡುವ ಪ್ರತಿಯೊಂದು ಕಾರ್ಯವೂ ಭಗವಂತನಿಗೆ ಒಪ್ಪಿಗೆಯಾಗುವಂತಿರಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು. ಧಾರವಾಡದ ಉತ್ತರಾದಿ ಮಠದ ನೂತನ ಕಟ್ಟಡದ ಆವರಣದಲ್ಲಿ ನಡೆಯುತ್ತಿರುವ 31ನೇ ಚಾತುರ್ಮಾಸ್ಯ ಅಂಗವಾಗಿ ಶುಕ್ರವಾರ ನಡೆದ 49ನೇ ದಿನದ ಆಶೀರ್ವಚನದಲ್ಲಿ ಅವರು ಮಾತನಾಡಿದರು. ಶ್ರೀಕೃಷ್ಣ ಪರಮಾತ್ಮನ ಲೀಲೆಗಳು ಹಾಗೂ ಅದ್ಭುತ ಮಹಿಮೆಗಳನ್ನು ಭಾಗವತದ ದಶಮ ಸ್ಕಂದದಲ್ಲಿ ವಿವರಿಸಲಾಗಿದೆ. ಜೀವನದಲ್ಲಿ ಎದುರಾಗುವ ಸಂಸಾರದ…

Read More

ಬರ ನಿರ್ವಹಣೆ: ಮೊದಲು SDRF ನಿಧಿ ನೀಡಲಿ ರಾಜ್ಯ ಸರ್ಕಾರ

• ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ• ರಾಜ್ಯ ಸರ್ಕಾರಕ್ಕೆ ಬರ ಪರಿಸ್ಥಿತಿಯ ಗಂಭೀರತೆಯೇ ಇಲ್ಲ• ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆಗಿದ್ದಕ್ಕೆ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ• ಕಸ್ತೂರಿ ರಂಗನ್ ವರದಿ; ಕರ್ನಾಟಕ, ಜನರ ಹಿತಕ್ಕೆ ಕೇಂದ್ರ ಸರ್ಕಾರ ಯಾವತ್ತೂ ಬದ್ಧ ಬೆಂಗಳೂರುಬರ ಪರಿಸ್ಥಿತಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಗಂಭೀರತೆಯೇ ಇಲ್ಲ. ಹಾಗಾಗಿ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಮೊದಲು SDRF ನಿಧಿ ಬಿಡುಗಡೆ ಮಾಡಲಿ ನೋಡೋಣ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದರು. ಬೆಂಗಳೂರಿನಲ್ಲಿ…

Read More

ಕೃಷಿ ಮೇಳ: ಬೀಜ ಮೇಳ ಹಳೆಯ ತಳಿಗೆ ಮಹತ್ವ ನೀಡಿ

ಹಳೆಯ ತಳಿಯ ಬೀಜಗಳನ್ನು ಸಂರಕ್ಷಣೆ ಮಾಡುವುದು ಅವಶ್ಯ ವಿಶ್ರಾಂತ ಕುಲಪತಿ ಡಾ. ಆರ್.ಆರ್. ಹಂಚಿನಾಳ ಧಾರವಾಡಕೃಷಿಯಲ್ಲಿ ತಲೆ ತಲಾಂತರದಿಂದ ಹಳೆಯ ತಳಿಗಳನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಹಿಂದಿನ ತಳಿಗಳನ್ನು ಸಂರಕ್ಷಿಸಿ ಕಾಪಾಡಬೇಕಿದೆ. ಆ ನಿಟ್ಟಿನಲ್ಲಿ ಹಳೆಯ ತಳಿಗಳ ಬೀಜಗಳನ್ನು ಸಂರಕ್ಷಣೆ ಮಾಡುವುದು ಅವಶ್ಯವಿದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಆರ್.ಆರ್. ಹಂಚಿನಾಳ ಹೇಳಿದರು. ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿ ಮೇಳ 2026 ರ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿದ್ದ ಬೀಜ ಮೇಳ ಉದ್ಘಾಟಿಸಿ ಅವರು…

Read More

ಕೃಷಿ ಮೇಳದಲ್ಲಿ ತಪ್ಪಿದ ಭಾರೀ ಅನಾಹುತ

7 ತಾತ್ಕಾಲಿಕ ಶೇಡ್‌ಗಳು ಧರೆಗುರುಳಿ; ಮೂವರು ಪ್ರಾಣಾಪಾಯದಿಂದ ಪಾರು ಅಗ್ನಿಶಾಮಕ ಸಿಬ್ಬಂದಿ, ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಹೆಚ್ಚಿನ ಅನಾಹುತ ತಪ್ಪಿತು ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಶುಕ್ರವಾರ ತಾತ್ಕಾಲಿಕ ಶೇಡ್‌ಗಳು ಏಕಾಏಕಿ ಕುಸಿದು ಬಿದ್ದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಅದೃಷ್ಟವಶಾತ್ ಘಟನೆಯಲ್ಲಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ದೊಡ್ಡ ಪ್ರಮಾಣದ ಜೀವಹಾನಿ ಸಂಭವಿಸಿಲ್ಲ. ಕೃಷಿ ಮೇಳಕ್ಕಾಗಿ ನಿರ್ಮಿಸಲಾಗಿದ್ದ ಸುಮಾರು 7 ತಾತ್ಕಾಲಿಕ ಶೇಡ್‌ಗಳು ಏಕಾಏಕಿ ಕುಸಿದು ಬಿದ್ದವು. ಶೇಡ್‌ಗಳ ಕೆಳಗೆ…

Read More

ಕೃಷಿ ಮೇಳದಲ್ಲಿ ಬ್ಯಾಂಕ್‌ಗಳಿಂದ ರೈತರಿಗೆ ಮಾಹಿತಿ

ಧಾರವಾಡಎಸ್‌ಬಿಐ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಕೃಷಿಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವು. ಕರ್ನಾಟಕ ಗ್ರಾಮೀಣ ಬ್ಯಾಂಕ್ ರೈತರಿಗೆ ವಿಶೇಷ ಮಾಹಿತಿ ನೀಡಲು ಸಂಪೂರ್ಣ ಸಿದ್ಧತೆಯೊಂದಿಗೆ ಭಾಗವಹಿಸಿದ್ದು ವಿಶೇಷವಾಗಿತ್ತು. ಕರ್ನಾಟಕ ಗ್ರಾಮೀಣ ಬ್ಯಾಂಕಿನ ವಿಶೇಷ ಮಳಿಗೆಯನ್ನು ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ್ ಭಂಡಿವಾಡ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತರ ಅಭಿವೃದ್ಧಿ ಪ್ರಾದೇಶಿಕ ಅಭಿವೃದ್ಧಿಗೆ ಪೂರಕವಾಗಿದೆ. ಈ ಕಾರಣಕ್ಕೆ ಬ್ಯಾಂಕು ರೈತರಿಗೆ ಸಕಾಲಿಕ ಸಾಲ ಸೌಲಭ್ಯ ಒದಗಿಸುತ್ತಿದೆ ಎಂದರು.ರೈತರು ತಮ್ಮ ಸಂಪ್ರದಾಯಕ ಕೃಷಿಯ ಜೊತೆಗೆ ಆದಾಯ ಹೆಚ್ಚಿಸಬಲ್ಲ…

Read More

ಕೃಷಿ ಮೇಳದ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರದಿಂದ ನಾಲ್ಕು ದಿನಗಳ ವರೆಗೆ ನಡೆಯುತ್ತಿರುವ ಕೃಷಿ ಮೇಳದ ಕ್ಷಣಕ್ಷಣದ ಸುದ್ದಿ ಹಾಗೂ ವಿಶೇಷತೆಗಳು ನಿಮ್ಮ SKSUDDIMANE.COM ಅಲ್ಲಿ ಲಭ್ಯ ಧಾರವಾಡಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕೃಷಿ ಮೇಳದ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಬಿ. ಪ್ರಕಾಶ ಶುಕ್ರವಾರ ಚಾಲನೆ ನೀಡಿದರು. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆ.25ರಿಂದ 28ರವರೆಗೆ ನಡೆಯಲಿರುವ ಕೃಷಿ ಮೇಳದಲ್ಲಿ ಫಲಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿ ಗಮನ…

Read More

ಕೃಷಿ ಮೇಳಕ್ಕೆ ಕಳೆ; ಜಾನುವಾರು, ಕೀಟ, ಫಲ-ಪುಷ್ಪ ಪ್ರದರ್ಶನವೇ ಆಕರ್ಷಣೆ

ಧಾರವಾಡ:ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮೇಳದ ಅಂಗವಾಗಿ ನಿರ್ಮಿಸಲಾಗಿರುವ ವಿವಿಧ ಮಳಿಗೆಗಳು ಹಾಗೂ ಪ್ರದರ್ಶನಗಳು ರೈತರು, ಯುವಜನರು, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಗಮನ ಸೆಳೆಯುತ್ತಿವೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣವೇ ಮಧುವನಗಿತ್ತಿಯಂತೆ ಶೃಂಗಾರಗೊಂಡಿದ್ದು, ಎಲ್ಲೆಡೆ ಕೃಷಿ ಮೇಳದ ಸಂಭ್ರಮ ಮನೆಮಾಡಿದೆ. ಧಾರವಾಡ ಕೃಷಿ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಜಾನುವಾರು ಪ್ರದರ್ಶನ ವೀಕ್ಷಕರನ್ನು ಸೆಳೆಯುತ್ತಿದೆ. ವಿವಿಧ ತಳಿಯ ಜಾನುವಾರುಗಳು, ಅವುಗಳ ವಿಶೇಷತೆ, ಸಾಕಾಣಿಕೆ ವಿಧಾನ ಹಾಗೂ ವೈಜ್ಞಾನಿಕ ನಿರ್ವಹಣೆ ಕುರಿತು…

Read More

ಏಷ್ಯನ್ ಗೇಮ್ಸ್ ೨೦೨೬: ಜಪಾನ್ ಎದುರು ೩-೧ ಗೆಲುವು, ಮಹಿಳಾ ಹಾಕಿ ಸೆಮಿಫೈನಲ್‌ಗೆ ಭಾರತ

ನಾಗೋಯಾ: ಆತಿಥೇಯ ಜಪಾನ ಎದುರು ೩-೧ ಗೋಲುಗಳ ಗೆಲುವು ದಾಖಲಿಸಿದ ಭಾರತದ ಮಹಿಳಾ ಹಾಕಿ ತಂಡ ನಗೋಯಾ ಏಷ್ಯನ್ ಕ್ರೀಡೆಗಳ ಹಾಕಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಗಿಫು ಪ್ರಿಫೆಕ್ಟರಲ್ ಗ್ರೀನ್ ಸ್ಟೇಡಿಯಂನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಪಂದ್ಯದಲ್ಲಿ ಭಾರತದ ಪರ ಲಾಲ್ರೆಮ್‌ಸಿಯಾಮಿ ಹ್ಮಾರ್ಜೊತೆ(೫ನೇ ನಿಮಿಷ), ಇಶಿಕಾ ಚೌಧರಿ(೩೦ನೇ ನಿಮಿಷ) ಹಾಗೂ ನವ್ನೀತ್ ಕೌರ್(೩೬ನೇ ನಿಮಷ) ಗೋಲು ಬಾರಿಸಿದರೆ ಜಪಾನಿನ ಏಕೈಕ ಗೋಲು ಶಿಹೋ ಕೊಬಯಕಾವಾ ಅವರ ಸ್ಟಿಕ್‌ನಿಂದ ೪೬ನೇ ನಿಮಿಷದಲ್ಲಿ ದಾಖಲಾಯಿತು. ೨೦೨೩ರಲ್ಲಿ ಹ್ಯಾಂಗ್‌ಝಾನಲ್ಲಿ ಜಪಾನ್ ಎದುರೇ ಗೆದ್ದು…

Read More

ಇಂದಿನಿಂದ ಧಾರವಾಡ ಕೃಷಿ ಮೇಳ

ಕೃಷಿ ಮೇಳ ಸಿದ್ಧತಾ ಸ್ಥಳಕ್ಕೆ ಕುಲಪತಿ ಡಾ. ಎನ್.ಬಿ. ಪ್ರಕಾಶ್ ಭೇಟಿ ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆಪ್ಟೆಂಬರ್ 25 ರಿಂದ 28 ರವರೆಗೆ ನಡೆಯಲಿರುವ ಕೃಷಿ ಮೇಳ 2026 ರ ಸಿದ್ಧತಾ ಕಾರ್ಯವನ್ನು ಕುಲಪತಿ ಡಾ. ಎನ್.ಬಿ. ಪ್ರಕಾಶ್ ಅವರು ವಿಜ್ಞಾನಿಗಳು ಹಾಗೂ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಪರಿಶೀಲಿಸಿದರು. ಕುಲಪತಿಗಳು ತಾವೇ ಖುದ್ದಾಗಿ ಮೇಳದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸ್ಟಾಲ್‌ಗಳು ಹಾಗೂ ತಯಾರಿಕಾ ಘಟಕವನ್ನು ವೀಕ್ಷಿಸಿದರು. ಬೃಹತ್ ಜರ್ಮನ್ ಟೆಂಟ್‌ಗಳ ಅಳವಡಿಕೆ, ಒಳಾಂಗಣ ಪ್ರದರ್ಶನ ಹಾಲ್‌ಗಳು,…

Read More

ಭಕ್ತರಿಗೆ ಭಗವಂತನೇ ಸರ್ವಸ್ವ; ಶ್ರೀ ಸತ್ಯಾತ್ಮತೀರ್ಥರು

ಧಾರವಾಡಯಾವುದೇ ಜಡ ಪದಾರ್ಥ ಏನೇ ಮಾಡಬೇಕಾದರೂ ಒಳಗಡೆ ಚೇತನ ಬೇಕೇಬೇಕು. ಸ್ವತಂತ್ರವಾದ ಭಾವವೇ ಭಗವಂತ. ಎಲ್ಲದರಲ್ಲಿಯೂ ದೇವರಿದ್ದಾನೆ. ಬಕಾಸುರನೆಂಬ ಅಸುರ ಬಕ ಪಕ್ಷಿಯ ರೂಪದಲ್ಲಿ ಕೃಷ್ಣನನ್ನು ನುಂಗಿದಾಗ ಒಳ ಹೋದ ಕೃಷ್ಣ ಪರಮಾತ್ಮ ನಿಗಿ ನಿಗಿ ಅಗ್ನಿಯಾಗಿ ಬಿಟ್ಟ. ಅತಿಯಾದ ಶಾಖವನ್ನು ತಡೆಯದ ಬಕ ಪಕ್ಷಿಯ ರೂಪದಲ್ಲಿದ್ದ ಬಕಾಸುರ ಅದನ್ನು ಹೊರ ಉಗುಳಿದಾಗ ಹೊರ ಬಂದ ಕೃಷ್ಣ ಬಕಾಸುರನನ್ನು ಸಂಹರಿಸಿ ಬಿಟ್ಟ. ಗೋವುಗಳನ್ನು ಮತ್ತು ಗೋಪಾಲಕರನ್ನು ರಕ್ಷಣೆ ಮಾಡಿದ ಪರಮಾತ್ಮ. ಎಲ್ಲಿ ನೋಡಿದರೂ ಕೃಷ್ಣ. ಕೃಷ್ಣನೇ ಸರ್ವಸ್ವ…

Read More