ಕೈದಿಗಳ ಕೈಚಳಕಕ್ಕೆ ಭಾರೀ ಬೇಡಿಕೆ
ಧಾರವಾಡ ಕೃಷಿ ಮೇಳದಲ್ಲಿ ಕೇಂದ್ರ ಕಾರಾಗೃಹದ ಮಳಿಗೆ ಗ್ರಾಹಕರಿಂದ ಮೆಚ್ಚುಗೆ ಧಾರವಾಡಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರು ಕೃಷಿ ಮೇಳದಲ್ಲಿ ಕೇಂದ್ರ ಕಾರಾಗೃಹದ ವತಿಯಿಂದ ತೆರೆದಿರುವ ಮಳಿಗೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಕಾರಾಗೃಹದ ಕೈದಿಗಳು ತಯಾರಿಸಿದ ವಿವಿಧ ಕೈಮಗ್ಗ ಹಾಗೂ ಕರಕುಶಲ ಉತ್ಪನ್ನಗಳಿಗೆ ಮೇಳಕ್ಕೆ ಆಗಮಿಸುತ್ತಿರುವ ಲಕ್ಷಾಂತರ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೃಷಿ ಮೇಳದಲ್ಲಿ ಈ ವರ್ಷದಿಂದ ಮೊದಲ ಬಾರಿಗೆ ಮಳಿಗೆ ಹಾಕಿದ್ದು ವಿಶೇಷ. ಬಣ್ಣ ಬಣ್ಣದ ಚೀಲಗಳು, ಬಟ್ಟೆ, ಕರಕುಶಲ ವಸ್ತುಗಳು, ಬೇಕರಿ ಉತ್ಪನ್ನಗಳು…
