ಮಳೆಯಲ್ಲೂ ಕರ್ತವ್ಯ: ಗಣೇಶ ವಿಸರ್ಜನೆ ಮುಗಿಯುವವರೆಗೂ ಸ್ಥಳದಲ್ಲೇ ನಿಂತ ಎಸಿಪಿ
ಧಾರವಾಡ ಎಸಿಪಿ ಪ್ರಶಾಂತ ಸಿದ್ದನಗೌಡರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಧಾರವಾಡ: ತಡರಾತ್ರಿ ಧಾರವಾಡ ನಗರದಲ್ಲಿ ಜೋರಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯ ಸ್ವಲ್ಪ ತಡವಾಯಿತು. ಆದರೆ ಮಳೆಯನ್ನೂ ಲೆಕ್ಕಿಸದೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯದಲ್ಲಿ ಮುಂದುವರಿದಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ಗಣೇಶ ವಿಸರ್ಜನೆ ಸುಗಮವಾಗಿ ನಡೆಯುವಂತೆ ಧಾರವಾಡ ಎಸಿಪಿ ಪ್ರಶಾಂತ ಸಿದ್ದನಗೌಡರ ಅವರು ಸ್ವತಃ ಸ್ಥಳದಲ್ಲೇ ನಿಂತು ಮಾರ್ಗದರ್ಶನ ನೀಡಿದರು. ವಿಸರ್ಜನೆ ಪೂರ್ಣಗೊಳ್ಳುವವರೆಗೂ ಸ್ಥಳದಲ್ಲಿದ್ದು, ಪೊಲೀಸ್ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಿದರು….
