ಧಾರವಾಡ
ಮೈಸೂರಿನಲ್ಲಿ ನಡೆದ ದಸರಾ ರಾಜ್ಯಮಟ್ಟದ ಸಿಎಂ ಟ್ರೋಫಿ ಅಥ್ಲೆಟಿಕ್ಸ್ ಕೂಟದಲ್ಲಿ ಮರಾಠಾ ವಿದ್ಯಾಪ್ರಸಾರಕ ಮಂಡಳದ ಶ್ರೀ ಶಿವಾಜಿ ಛತ್ರಪತಿ ಮಹಾರಾಜ ಪದವಿಪೂರ್ವ ಮತ್ತು ಪದವಿ ಕಾಲೇಜಿನ ನಾಲ್ವರು ಕ್ರೀಡಾಪಟುಗಳು ಪದಗಳ ಸಾಧನೆ ಮಾಡಿದ್ದಾರೆ.
ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾಹಿತ್ಯ ಪವಾರ ಕಂಚಿನ ಪದಕ, ಕುಸ್ತಿಯಲ್ಲಿ ಶಿವಪ್ಪ ಅಲಬಾಳ ಬೆಳ್ಳಿ ಪದಕ ಹಾಗೆಯೇ ೧೦ ಸಾವಿರ ಮೀಟರ್ ಓಟದಲ್ಲಿ ಪದವಿ ಕಾಲೇಜಿನ ರಮೇಶ ಬಳ್ಳಿಗಟ್ಟಿ ಕಂಚಿನ ಪದಕ ಪಡೆದಿದ್ದಾನೆ.
ಅಲ್ಲದೇ, ಬಲ್ಲೆ ಎಸೆತ ಸ್ಪರ್ಧೆಯಲ್ಲಿ ಸಂಗಪ್ಪ ಡಾಂಗೆ ಕಂಚಿನ ಪದಕ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಸಾಧನೆಗೈದ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಮನೋಹರ ಮೋರೆ, ಉಪಾಧ್ಯಕ್ಷ ಪ್ರಕಾಶ ಘಾಟಗೆ, ಕಾರ್ಯಾಧ್ಯಕ್ಷ ಮಹೇಶ ಶಿಂಧೆ, ಗೌರವ ಕಾರ್ಯದರ್ಶಿ ವಿಠ್ಠಲ ಪಾಟೀಲ, ಸಹ ಕಾರ್ಯದರ್ಶಿ ಈಶ್ವರ ಪಾಟೀಲ, ಕಾಲೇಜು ಸುಧಾರಣಾ ಸಮಿತಿಯ ಮುಖ್ಯಸ್ಥರಾದ ನವೀನ ಕದಂ, ವಿಜಯ ಭೋಸ್ಲೆ, ಮಂಡಳದ ನಿರ್ದೇಶಕರು, ಪ್ರಾಚಾರ್ಯರು, ದೈಹಿಕ ನಿರ್ದೇಶಕರು ಅಭಿನಂದಿಸಿದ್ದಾರೆ.

