ರಂಭಾಪುರಿ ಜಗದ್ಗುರುಗಳ ಅಕ್ಟೋಬರ್ ಪ್ರವಾಸ

ಹಂಚಿಕೊಳ್ಳಿ

ರಂಭಾಪುರಿ ಪೀಠ(ಬಾಳೆಹೊನ್ನೂರು)
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 2026-ಅಕ್ಟೋಬರ್ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತೆ ಇರುತ್ತದೆ ಎಂದು ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ ತಿಳಿಸಿದ್ದಾರೆ.

ದಿ. 2ರಂದು ರೋಣದಲ್ಲಿ ಗುರುಕುಲ ಪ್ರಾರಂಭೋತ್ಸವ ಸಮಾರಂಭ, ದಿ. 3ರಂದು ರೋಣ ತಾಲೂಕ ಅಬ್ಬಿಗೇರಿ ಗ್ರಾಮದಲ್ಲಿ ಲಿಂ. ಸೋಮಶೇಖರ ಶ್ರೀಗಳವರ ಪುಣ್ಯ ಸ್ಮರಣೋತ್ಸವ ಸಮಾರಂಭ, ದಿ. 5ರಂದು ಯಲಬುರ್ಗಾ ತಾಲೂಕ ಕಲ್ಲೂರು ಗ್ರಾಮದಲ್ಲಿ ಹಿರೇಮಠದ ನೂತನ ಕಟ್ಟಡ ಉದ್ಘಾಟನಾ ಧರ್ಮ ಸಮಾರಂಭ, ದಿ. 7ರಂದು ಚಿಕ್ಕಮಗಳೂರಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸುವರು.

ದಿನಾಂಕ 9ರಂದು ಶ್ರೀ ರಂಭಾಪುರಿ ಪೀಠದಿಂದ ಹುಬ್ಬಳ್ಳಿಗೆ ಪ್ರಯಾಣ, ದಿ. 10ರಂದು ಹುಬ್ಬಳ್ಳಿಯಿಂದ ಜಮಖಂಡಿ ದಸರಾ ಸಮಾರಂಭಕ್ಕೆ ಪ್ರಯಾಣ ಬೆಳೆಸುವರು. ದಿ. 11ರಿಂದ 21ರ ವರೆಗೆ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ ತಮ್ಮ 35ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಡೆಸುವರು.

ದಿನಾಂಕ 25ರಂದು ಬೆಂಗಳೂರಿನ ವರ್ತೂರಿನಲ್ಲಿ ನೂತನ ಕಾಲೇಜ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ದಿ. 26ರಂದು ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ವಾಸ್ತವ್ಯ ಮಾಡಿ ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡುವರು. ದಿ. 27ರಂದು ಶಿಕಾರಿಪುರ ತಾಲೂಕ ದಿಂಡದಹಳ್ಳಿಯಲ್ಲಿ ಲಿಂ. ಶಿವಾನಂದ ಶ್ರೀಗಳ 24ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ದಿ.‌ 28ರಂದು ಲಕ್ಷ್ಮೇಶ್ವರ ತಾಲೂಕ ಮುಕ್ತಿಮಂದಿರ ಕ್ಷೇತ್ರದಲ್ಲಿ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವ ಸಮಾರಂಭ, ದಿ. 30ರಂದು ರಬಕವಿ ಬನಹಟ್ಟಿ ತಾಲೂಕಿನ ಗೋಲಭಾವಿಯಲ್ಲಿ ಮಠದ ಚನ್ನಬಸಯ್ಯ-ರಾಚಮ್ಮ ದಂಪತಿಗಳ ಶತಮಾನೋತ್ಸವ ಸಮಾರಂಭ ಹಾಗೂ ದಿ. 31ರಂದು ಜೇವರ್ಗಿ ತಾಲೂಕ ಶಖಾಪುರ ತಪೋವನಮಠದಲ್ಲಿ ಲಿಂ. ಶ್ರೀ ಸಿದ್ಧರಾಮೇಶ್ವರ ಶ್ರೀಗಳವರ 76ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸುವರು.

ಶ್ರೀ ರಂಭಾಪುರಿ ಜಗದ್ಗುರುಗಳವರ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಸಮಸ್ತ ಧರ್ಮಾಭಿಮಾನಿಗಳು ಪಡೆದುಕೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *