ಧಾರವಾಡ ತಹಶೀಲ್ದಾರ್ ಲೋಕಾ ಬಲೆಗೆ; ತಹಶೀಲ್ದಾರ್ ಜೊತೆ ಮತ್ತ್ಯಾರು?
ಹಂಚಿಕೊಳ್ಳಿ₹50 ಲಕ್ಷ ಲಂಚ ಪ್ರಕರಣ ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆ; ಸಮಗ್ರ ತನಿಖೆಗೆ ಆಗ್ರಹ ಧಾರವಾಡ: ಭೂ ದಾಖಲೆ ತಿದ್ದುಪಡಿ ಹಾಗೂ ಖರಾಬು ಜಮೀನಿನ ಪ್ರಕ್ರಿಯೆಗೆ ಸಂಬಂಧಿಸಿದಂತೆ ₹1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟು, ಅದರ ಮೊದಲ ಕಂತಾಗಿ ₹50 ಲಕ್ಷ ಸ್ವೀಕರಿಸುತ್ತಿದ್ದ ವೇಳೆ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಲೋಕಾಯುಕ್ತರ ಬಲೆಗೆ ಬಿದ್ದಿರುವ ಪ್ರಕರಣ ಇದೀಗ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ. ಧಾರವಾಡ ತಾಲೂಕಿನ ಯರಿಕೊಪ್ಪ ವ್ಯಾಪ್ತಿಯ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಲಂಚದ ಬೇಡಿಕೆ…
