೧೪ ವರ್ಷದವರೊಳಗಿನ ಅಂತರ-ಕ್ಲಬ್ ಕ್ರಿಕೆಟ್ ಟೂರ್ನಿ ಇಂದಿನಿಂದ

ಹುಬ್ಬಳ್ಳಿ:೨೦೨೬-೨೭ನೇ ಸಾಲಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಧಾರವಾಡ ವಲಯ ೧೪ ವರ್ಷದವರೊಳಗಿನ ಬಾಲಕರ ಅಂತರ-ಕ್ಲಬ್ ಕ್ರಿಕೆಟ್ ಪಂದ್ಯಾವಳಿ ಶನಿವಾರ, ದಿನಾಂಕ ೧೦ರಿಂದ ಪ್ರಾರಂಭವಾಗಲಿದೆ. ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಗದಗ ಹಾಗೂ ಭಟ್ಕಳಗಳ ಒಟ್ಟು ೩೫ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು ಆ ತಂಡಗಳನ್ನು ಎಂಟು ಗುಂಪುಗಳಲ್ಲಿ ವಿಂಗಡಿಸಲಾಗಿದೆ ಎಂದು ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ ತಿಳಿಸಿದ್ದು ಲೀಗ್ ಪಂದ್ಯಗಳ ಮುಕ್ತಾಯದ ನಂತರ ದಿನಾಂಕ ೨೫ ಹಾಗೂ ೨೬ ರಂದು ಪ್ರಿ-ಕ್ವಾರ್ಟರ್‌ಫೈನಲ್ಸ್, ೨೮ರಂದು ಕ್ವಾರ್ಟರ್‌ಫೈನಲ್ಸ್, ೨೯ರಂದು…

Read More

ಶಾಯ್ ಹೋಪ್ ಅಬ್ಬರದೆದುರು ಮಂಕಾದ ಶ್ರೇಯಸ್ ಪಡೆ, ವಿಂಡೀಸ್‌ಗೆ ಜಯ, ಸರಣಿಗೆ ೧-೧ರ ಸಮಸ್ಥಿತಿ

ರಾಂಚಿ:ಪ್ರಾರಂಭಿಕ ಬ್ಯಾಟರ್ ಶಾಯ್ ಹೋಪ್ ಅಬ್ಬರದ ಅಜೇಯ ಶತಕ ಸಿಡಿಸುವುದರೊಂದಿಗೆ ಪ್ರವಾಸಿ ವೆಸ್ಟ್ ಇಂಡೀಸ್ ಶುಕ್ರವಾರ ಇಲ್ಲಿ ನಡೆದ ಎರಡನೇ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇನ್ನೂ ೯ ಎಸೆತಗಳು ಬಾಕಿಯಿರುವಂತೆಯೇ ಭಾರತವನ್ನು ೬ ವಿಕೆಟ್‌ಗಳಿಂದ ಪರಾಭವಗೊಳಿಸಿತು. ಇದರೊಂದಿಗೆ ೫ ಪಂದ್ಯಗಳ ಸರಣಿ ೧-೧ರ ಸಮಸ್ಥಿತಿ ಕಂಡಿತು. ತಾವೆದುರಿಸಿದ ೪೫ ಎಸೆತಗಳಲ್ಲಿ ೬ ಬೌಂಡರಿ ಹಾಗೂ ೯ ಸಿಕ್ಸರ್‌ಗಳಿದ್ದ ೧೦೨ ರನ್ ಸಿಡಿಸಿ ಅಜೇಯರಾಗುಳಿದ ಶಾಯ್ ಹೋಪ್ ವಿಂಡೀಸ್ ಗೆಲುವಿನ ರೂವಾರಿಯೆನಿಸಿದರು.ಜೆ.ಎಸ್.ಸಿ.ಎ. ಅಂತಾರಾಷ್ಟ್ರೀಯ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ ಗೆಲ್ಲಲು…

Read More

ಐಐಸಿ(IIC)ನಲ್ಲಿ ಪ್ರತಿಷ್ಠಿತ 4-ನಕ್ಷತ್ರ ರೇಟಿಂಗ್ ಪಡೆದ ಎಸ್‌ಡಿಎಂಸಿಇಟಿ

ಧಾರವಾಡಎಸ್. ಡಿ. ಎಮ್. ಇಂಜಿನಿಯರಿಂಗ್ ಕಾಲೇಜು, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ‘ಇನ್ನೋವೇಶನ್ ಕೌನ್ಸಿಲ್’ ವತಿಯಿಂದ ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ಕೊಡಮಾಡುವ 4-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಉದ್ಯಮಶೀಲತೆ, ಸೃಜನಶೀಲತೆ ಮತ್ತು ಈ ಕುರಿತಾದ ಸಮಸ್ಯೆ-ಪರಿಹರಿಸುವ ಕೌಶಲ್ಯಗಳ ಸಂಸ್ಕೃತಿಯನ್ನು ಬೆಳೆಸಲು ಸಂಸ್ಥೆಯು ನಡೆಸಿದ ನಿರಂತರ ಪ್ರಯತ್ನಗಳಿಗೆ ಈ ಮನ್ನಣೆ ಸಾಕ್ಷಿಯಾಗಿದೆ. ಶಿಕ್ಷಣ ಸಚಿವಾಲಯವು ಗೊತ್ತುಮಾಡಿದ ವರ್ಗಗಳ ಅಡಿಯಲ್ಲಿನ ವಿವಿಧ ಚಟುವಟಿಕೆಗಳು ಮತ್ತು ಉಪಕ್ರಮಗಳಲ್ಲಿ ಸಂಸ್ಥೆಯು ತೋರಿದ ಸಾಧನೆಯ ಆಧಾರದ ಮೇಲೆ ಈ ರೇಟಿಂಗ್ ಅನ್ನು…

Read More

ಅಳಿವಿನ ಅಂಚಿನಲ್ಲಿ ಅಂಚೆಪತ್ರ

ಧಾರವಾಡಅಂಚೆ ಪತ್ರ ಇಂದು ಮೊಬೈಲ್ ಹಾವಳಿಯಿಂದ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದು, ಹಿಂದಿನ ಕಾಲದಲ್ಲಿ ಅಂಚೆ ಪತ್ರ ಮತ್ತು ಮನಿ ಆರ್ಡರ್ ಬರುವುದನ್ನು ಜನ ಕಾಯುತ್ತಿದ್ದರು. ಪೋಸ್ಟಮನ ಯಾವಾಗ ಬರುತ್ತಾರೆ, ಅವರು ಹೊತ್ತು ತರುವ ಪತ್ರಗಳು ಜನ ಕಾತುರದಿಂದ ಕಾದು ಪತ್ರ ಪಡೆಯುತ್ತಿದ್ದರು ಎಂದು ರಾಷ್ಟ್ರೀಯ ಶಿಕ್ಷಕರ ಫೆಡರೇಷನ್ ಅಧ್ಯಕ್ಷರು ಬಸವರಾಜ ಗುರಿಕಾರ ಹೇಳಿದರು. ನಗರದ ರಂಗಾಯಣದಲ್ಲಿ ಪವರ್ ಆಫ್ ಯುತ್ಸ ಫೌಂಡೇಶನ್ ಕರ್ನಾಟಕ ವತಿಯಿಂದ ಜರುಗಿದ ಅಂಚೆ ಪತ್ರ ಕಿರುಚಿತ್ರ ಬಿಡುಗಡೆ ಮತ್ತು ಅಕ್ಷರ ತಾಯಿ ಎಂದೇ…

Read More

ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ

ಅಕ್ಟೋಬರ್ 11ರಿಂದ 21ರ ವರಗೆ ಜಮಖಂಡಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಬಾಳೆಹೊನ್ನೂರುಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕ ಕೇಂದ್ರದಲ್ಲಿ ಇದೇ ಅಕ್ಟೋಬರ್ 11 ರಿಂದ 21ರ ವರೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 35ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಜರುಗಲಿದೆ. ಜಮಖಂಡಿಯ ಕಡಪಟ್ಟಿ ಶ್ರೀ ಬಸವಣ್ಣ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ಮಾನವ ಧರ್ಮ ಮಂಟಪದಲ್ಲಿ ಪ್ರತಿ ನಿತ್ಯದ ಕಾರ್ಯಕ್ರಮಗಳು ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುತ್ತವೆ ಎಂದು…

Read More

ಕರಿಯಮ್ಮ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ ಉತ್ಸವ

ಧಾರವಾಡನಗರದ ಕೆಲಗೇರಿ ರಸ್ತೆಯ ಶಾಂತಿ ನಿಕೇತನ ನಗರದಲ್ಲಿರುವ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ಬರುವ ರವಿವಾರ ಅಕ್ಟೋಬರ್ ೧೧ ರಿಂದ ಒಂಬತ್ತು ದಿನಗಳ ಕಾಲ ನವರಾತ್ರಿ ಉತ್ಸವವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶಾಂತಿ ನಿಕೇತನ ನಗರದಲ್ಲಿ ನೆಲೆಗೊಂಡಿರುವ ಶ್ರೀ ಕರಿಯಮ್ಮ ದೇವಿಯನ್ನು ಶ್ರೀ ಮಹಾಕಾಳಿ, ಶ್ರೀ ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ತ್ರಿಗುಣಾತ್ಮಕ ಸ್ವರೂಪಳೆಂದು ಹೇಳಲಾಗುತ್ತಿದೆ. ದೇವಿಯು ನಂಬಿದ ಭಕ್ತರು ಮತ್ತು ರೈತರಿಗೆ ಆದಿಶಕ್ತಿಯಾಗಿದ್ದಾಳೆ. ನವರಾತ್ರಿ ಉತ್ಸವದ ಅಂಗವಾಗಿ ಒಂಬತ್ತು ದಿನಗಳ ಕಾಲ ದೇವಿಗೆ ವಿವಿಧ ಅಲಂಕಾರ ಮಾಡಲಾಗುತ್ತಿದೆ….

Read More

೧೪ ವಿಕೆಟ್ ಕಬಳಿಸಿದ ತನ್ಮಯ್ ಬಲೋಡಾ

ಭಾರತಕ್ಕೆ ಆಸ್ಟ್ರೇಲಿಯಾ ಅಂಡರ್-೧೯ ತಂಡದೆದುರು ೧೦ ವಿಕೆಟ್ ಹಾಗೂ ೨-೦ ಸರಣಿ ಗೆಲುವು ಅಹಮದಾಬಾದತಾವಾಡಿದ ಮೊದಲ ಪಂದ್ಯದಲ್ಲೇ ಎಡಗೈ ಸ್ಪಿನ್ನರ್ ತನ್ಮಯ್ ಬಲೋಡಾ ೧೪ ವಿಕೆಟ್ ಕಬಳಿಸುವುದರೊಂದಿಗೆ, ಭಾರತದ ೧೯ ವರ್ಷದವರೊಳಗಿನ ತಂಡ ಇಲ್ಲಿ ನಡೆದ ಎರಡನೇ `ಯೂಥ್ ಟೆಸ್ಟ್’ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ೧೯ ವರ್ಷದವರೊಳಗಿನ ತಂಡವನ್ನು ೧೦ ವಿಕೆಟ್‌ಗಳಿಂದ ಹಣಿದು ಸರಣಿಯನ್ನು ೨-೦ ಅಂತರದಿAಲಂದ ತನ್ನದಾಗಿಸಿಕೊಂಡಿತು. ಅಮಾನತುಗೊಂಡ ರೋಹಿತ್ ಯಾದವ ಬದಲಿಗೆ ತಂಡಕ್ಕೆ ಸೇರ್ಪಡೆಯಾದ ತನ್ಮಯ್ ಬಲೋಡಾ ಎರಡನೇ ಸರದಿಯಲ್ಲೂ ಮಾರಕ ದಾಳಿ ನಿರ್ವಹಿಸಿ ೪೧…

Read More

ಜೀವ ಸಂಕುಲದ ಉಳಿವಿಗೆ ಆದ್ಯತೆ ನೀಡಿ

ಧಾರವಾಡಜೀವ ಸಂಕುಲದ ಉಳಿವಿಗಾಗಿ ಸಸ್ಯ ಮತ್ತು ಮರಗಳನ್ನು ಬೆಳಿಸಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಖಾಯದ ಡೀನ್ ಪ್ರೊ. ಸಿ. ಕೃಷ್ಣಮೂರ್ತಿ ಹೇಳಿದರು. ಕರ್ನಾಟಕ ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಆವರಣದಲ್ಲಿ ಆಯೋಜಿಸಿದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿಗಳನ್ನು ‌ನೆಟ್ಟು ಮಾತನಾಡಿದರು. ಪ್ರಸ್ತುತ ಪರಿಸರದ ಅಸಮತೋಲನದಿಂದ ನೈಸರ್ಗಿಕ ವಿಪತ್ತುಗಳು ಹೆಚ್ಚಾಗುತ್ತಿವೆ ಆದ್ದರಿಂದ ಹಸಿರು ಪರಿಸರವನ್ನು ಸಂರಕ್ಷಿಸಿ ಬೆಳಸಬೇಕಾಗಿದೆ ಎಂದ ಅವರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಸ್ಯ ಗಿಡಮರಗಳ ಮಹತ್ವವನ್ನು ಅರಿಯಬೇಕು ಎಂದರು….

Read More

ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆ ಕಲಾ ಸಂಘ

ಧಾರವಾಡಬಿ.ಎ. ವಿದ್ಯಾರ್ಥಿಗಳಿಗೆ ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಕಷ್ಟು ಅವಕಾಶಗಳಿವೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ವರ್ತಮಾನದ ಮಾನದಂಡಗಳಿಗೆ ಸ್ಪಂದಿಸಿ ಕಲಿಕೆ ಮುಂದುವರೆಸಿಕೊಳ್ಳಿರಿ. ನಿಮ್ಮ ಪ್ರತಿಭೆ ಬಹುಮುಖವಾಗಿರಲಿ. ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಿರಿ. ನಿಮ್ಮ ಬದುಕಿನ ಯಶಸ್ಸು ನಮ್ಮ ಗುರಿ. ಕಲಾತ್ಮಕ ಕೌಶಲ್ಯಗಳು ಇಂದು ಸಾಕಷ್ಟು ಲಭ್ಯವಿವೆ ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತಪ್ರಸಾದ ಹೇಳಿದರು. ನಗರದ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಲಾ ಸಂಘದಿಂದ…

Read More

ವಿದ್ಯಾರ್ಥಿಗಳ ಗುರಿ ಉತ್ತಮ ವ್ಯಕ್ತಿತ್ವ: ಶ್ರೀ ರಂಭಾಪುರಿ ಜಗದ್ಗುರುಗಳು

ಪ್ರತಿ ಜಿಲ್ಲೆಗೊಂದು ವೀರಶೈವ ಲಿಂಗಾಯಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಬೇಕೆಂಬ ಸಂಕಲ್ಪ ಮಹಾಸಭಾ ಕೈಗೊಂಡಿದೆ: ಈಶ್ವರ ಖಂಡ್ರೆ ಚಿಕ್ಕಮಗಳೂರುಶಿಕ್ಷಣವೆಂದರೆ ಕೇವಲ ಅಂಕಗಳನ್ನು ಗಳಿಸುವುದಲ್ಲ. ಶಿಕ್ಷಣವು ವ್ಯಕ್ತಿಯಲ್ಲಿ ಜ್ಞಾನ ಸಂಸ್ಕಾರ ಶಿಸ್ತು ಆತ್ಮವಿಶ್ವಾಸ ಮತ್ತು ಸಮಾಜದ ಬಗ್ಗೆ ಜವಾಬ್ದಾರಿ ಹೊಂದಿರಬೇಕು. ಉತ್ತಮ ಅಂಕಗಳನ್ನು ಗಳಿಸುವುದರ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಬುಧವಾರ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ…

Read More