ಹರಿನಾಮಸ್ಮರಣೆ ಬಾಲಕಿಯರ ವೃಂದದ ಭಕ್ತಿಗಾನ
ಧಾರವಾಡನಗರದ ಗಾಂಧಿ ಚೌಕ್‌ನಲ್ಲಿರುವ ಶ್ರೀ ಹಾಲಗೇರಿ ಹನುಮಂತ ದೇವಸ್ಥಾನದಲ್ಲಿ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾ ಪಿ. ಹಂಚಿನಮನಿ ಇಂಟರ್‌ನ್ಯಾಷನಲ್ ಶಾಲೆಯ ‘ಹರಿನಾಮಸ್ಮರಣೆ ಬಾಲಕಿಯರ ವೃಂದ’ದ 17 ವಿದ್ಯಾರ್ಥಿನಿಯರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ಭಕ್ತರ ಮನಸೂರೆಗೊಂಡರು. ವಿದ್ಯಾರ್ಥಿನಿಯರು ಸುಮಧುರ ಕಂಠದಿಂದ ಭಕ್ತಿಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಭಕ್ತಿರಸದ ಮೆರುಗು ನೀಡಿದರು. ಕುಮಾರಿ ಪಾವನಿ ಜೋಶಿ ತಬಲಾ ವಾದನದಲ್ಲಿ ಹಾಗೂ ಕುಮಾರಿ ಭೂಮಿಕಾ ಕುಲಕರ್ಣಿ ಕೀಬೋರ್ಡ್ ವಾದನದಲ್ಲಿ ಸಾಥ್ ನೀಡಿದರು. ವಿದ್ಯಾರ್ಥಿನಿಯರ ಭಕ್ತಿ, ಸಂಗೀತ ಪ್ರತಿಭೆ ಹಾಗೂ ಶಿಸ್ತುಬದ್ಧ ಪ್ರಸ್ತುತಿ ನೆರೆದಿದ್ದ ಭಕ್ತರ…
