ದಿ. ಹರೀಶ ಕೋಪರ್ಡೆ ಸ್ಮರಣಾರ್ಥ ಗಾಂಧಿನಗರದಲ್ಲಿ ಬಸ್ ತಂಗುದಾಣ ನಿರ್ಮಾಣ

ಸಾರ್ವಜನಿಕರ ಅನುಕೂಲಕ್ಕಾಗಿ ಕೋಪರ್ಡೆ ಕುಟುಂಬದಿಂದ ₹5 ಲಕ್ಷ ವೆಚ್ಚದಲ್ಲಿ ಸೇವಾ ಕಾರ್ಯ ಧಾರವಾಡದಿವಂಗತ ಹರೀಶ ಕೋಪರ್ಡೆ ಅವರ ಸ್ಮರಣಾರ್ಥ ಧಾರವಾಡದ ಗಾಂಧಿನಗರದಲ್ಲಿ ರೋಟರಿ ಸಂಸ್ಥೆ ಹಾಗೂ ಕೋಪರ್ಡೆ ಕುಟುಂಬದ ಸಹಯೋಗದಲ್ಲಿ ನಿರ್ಮಿಸಲಾದ ಬಸ್ ತಂಗುದಾಣದ ಉದ್ಘಾಟನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮವು ಕೋಡಿಮಠದ ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳ ಅಮೃತಹಸ್ತದಿಂದ ನೆರವೇರಿತು. ಆಶೀರ್ವಚನ ನೀಡಿದ ಶ್ರೀಗಳು, ಪುತ್ರನ ಸ್ಮರಣಾರ್ಥ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ತಂಗುದಾಣ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. “ತೋಡಿದ ಬಾವಿಗೆ ಜಲವೇ ಸಾಕ್ಷಿ, ಮಾಡಿದ ಕಾರ್ಯಕ್ಕೆ ಮನವೇ…

Read More

ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ 50 ಲಕ್ಷ ಅನುದಾನ ಭರವಸೆ

ಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತಿ ಆಚರಣೆ ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಧಾರವಾಡಹೂಗಾರ ಸಮಾಜದ ಮಕ್ಕಳಿಗಾಗಿ ಶೈಕ್ಷಣಿಕ ಕೇಂದ್ರಗಳು, ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣ ಸೇರಿದಂತೆ ಇಂಥ ಚಟುವಟಿಕೆಗಳಿಗೆ ಸುಮಾರು 50 ಲಕ್ಷಕ್ಕೂ ಅಧಿಕ ಆರ್ಥಿಕ ಸಹಾಯ ಒದಗಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು. ಹೂಗಾರ 12ನೇ ಶತಮಾನದ ಶರಣ ಹೂಗಾರ ಮಾದಯ್ಯನವರ ಜಯಂತಿ ಆಚರಣೆ ಮತ್ತು ಹೂಗಾರ ಸಮುದಾಯದ ಮಕ್ಕಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ…

Read More

ದಸರಾಕ್ಕೆ ಒಂದು ಒಳ್ಳೆಯ ನಿರ್ಧಾರ ಮಾಡೋಣ…!

🌹ಹಬ್ಬ ಆಚರಣೆಗೆ ಮಾತ್ರ ಸೀಮಿತವಾಗದಿರಲಿ; ನಮ್ಮ ಬದುಕಿನಲ್ಲಿ ಒಳ್ಳೆಯ ಬದಲಾವಣೆ ತರುವ ಸಂಕಲ್ಪವಾಗಲಿ🌹 ಧಾರವಾಡದಸರಾ ಎಂದರೆ ಕೇವಲ ಹಬ್ಬದ ಸಂಭ್ರಮವಲ್ಲ; ಅದು ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯವನ್ನು ಸಾರುವ ಪವಿತ್ರ ಹಬ್ಬ. ಶ್ರೀ ದುರ್ಗಾದೇವಿ ಮಹಿಷಾಸುರನನ್ನು ಸಂಹರಿಸಿದ ವಿಜಯದ ಸಂಕೇತವಾಗಿ ಆಚರಿಸುವ ವಿಜಯದಶಮಿ, ನಮ್ಮೊಳಗಿನ ಕೆಟ್ಟ ಆಲೋಚನೆ, ದುಶ್ಚಟ ಮತ್ತು ನಕಾರಾತ್ಮಕ ಗುಣಗಳನ್ನು ತೊಡೆದು ಹಾಕಲು ಪ್ರೇರಣೆ ನೀಡುತ್ತದೆ. ಪ್ರತಿವರ್ಷ ಹಬ್ಬ ಬರುತ್ತದೆ, ಸಂಭ್ರಮದಿಂದ ಆಚರಿಸುತ್ತೇವೆ, ಆದರೆ ನಮ್ಮ ಬದುಕಿನಲ್ಲಿ ಬದಲಾವಣೆ ತಂದುಕೊಳ್ಳುವ ಸಂಕಲ್ಪ ಮಾಡುತ್ತೇವೆಯೇ? ಈ…

Read More

ಹರ್ಮನ್, ಶಫಾಲಿ ಬ್ಯಾಟಿಂಗ್ ಅಬ್ಬರ, ನಂದನಿ ಮಾರಕ ದಾಳಿ, ಭಾರತಕ್ಕೆ ೩-೦ ಸರಣಿ ಸ್ವೀಪ್

ರಾಯಪುರಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಶಫಾಲಿ ವರ್ಮಾ ಅವರುಗಳ ಸ್ಫೋಟಕ ಬ್ಯಾಟಿಂಗ್ ಮತ್ತು ವೇಗಿ ನಂದನಿ ಶರ್ಮಾ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ಇಲ್ಲಿ ನಡೆದ ಮೂರು ಹಾಗೂ ಕೊನೆಯ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಜಿಂಬಾಬ್ವೆಯೆದುರು ೯೨ ರನ್‌ಗಳಿಂದ ಜಯಿಸಿ ಮೂರು ಪಂದ್ಯಗಳ ಸರಣಿಯಲ್ಲಿ ೩-೦ ವೈಟ್ ವಾಷ್’ ದಾಖಲಿಸಿತು. ಮಂಗಳವಾರ ರಾತ್ರಿ ಇಲ್ಲಿಯ ಶಹೀದ್ ವೀರ ನಾರಾಯಣಸಿಂಗ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ೭ ವಿಕೆಟ್‌ಗಳಿಗೆ…

Read More

ರಣಜಿ: ಸತತ ಎರಡನೇ ಪಂದ್ಯದಲ್ಲೂ ಇನ್ನಿಂಗ್ಸ್ ಲೀಡ್ ಕೈಚೆಲ್ಲಿದ ಕರ್ನಾಟಕ

ಬೆಂಗಳೂರುಕಳೆದ ಸಲದ ರನ್ನರ್ ಅಪ್ ಕರ್ನಾಟಕ ಹೊಸ ಋತುವಿನ ಸತತ ಎರಡನೇ ಪಂದ್ಯದಲ್ಲೂ ಮಹತ್ವದ ಇನ್ನಿಂಗ್ಸ್ ಮುನ್ನಡೆಯನ್ನು ಕೈ ಚೆಲ್ಲಿದೆ. ಸೌರಾಷ್ಟ್ರ ಎದುರು ನಗರದ ಹೊರ ವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆದಿರುವ ಎಲೀಟ್ ಗುಂಪಿನ ಲೀಗ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಎದುರಾಳಿಗಳಿಗೆ ಮೊದಲ ಸರದಿಯಲ್ಲಿ ಮಹತ್ವದ ೭ ರನ್‌ಗಳ ಮುನ್ನಡೆ ಒದಗಿಸಿಕೊಟ್ಟಿದೆ. ಕರ್ನಾಟಕದ ಮೊದಲ ಸರದಿಯ ಸ್ಕೋರಾದ ೩೪೨ಕ್ಕೆ ಉತ್ತರವಾಗಿ ಪಂದ್ಯದ ಮೂರನೇ ದಿನವಾದ ಮಂಗಳವಾರದಂದು ಸೌರಾಷ್ಟ್ರ ತನ್ನ ಮೊದಲ ಸರದಿಯಲ್ಲಿ ೩೪೯ ರನ್ ಸಂಪಾದಿಸಿತು. ಮೂರನೇ…

Read More

ಎರಡನೇ ರಣಜಿ ಪಂದ್ಯದಲ್ಲಿಯೇ ಶತಕ ಸಿಡಿಸಿದ ಮನ್ವಂತ್ ಕುಮಾರ್, ಸರದಿ ಮುನ್ನಡೆಗಾಗಿ ಸೌರಾಷ್ಟ್ರ ಹೋರಾಟ

ಬೆಂಗಳೂರುಮೈಸೂರು ಹುಡುಗ’ ಮನ್ವಂತ್ ಕುಮಾರ್ ತಾವಾಡಿದ ಎರಡನೇ ರಣಜಿ ಪಂದ್ಯದಲ್ಲಿಯೇ ಶತಕ ಸಿಡಿಸಿ ಕರ್ನಾಟಕಕ್ಕೆ ಉತ್ತಮ ಮೊತ್ತ ನೀಡಿದರಾದರೂ, ಛಲ ಬಿಡದ ಸೌರಾಷ್ಟ್ರ ಮಹತ್ವದ ಮೊದಲ ಸರದಿ ಮುನ್ನಡೆಗಾಗಿ ತೀವ್ರ ಪೈಪೋಟಿ ನಡೆಸಿದೆ. ನಗರದ ಹೊರವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆದಿರುವ ನಾಲ್ಕು ದಿನಗಳ ಎಲೀಟ್ ಗುಂಪಿನ ರಣಜಿ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಮೊದಲ ಸರದಿಯಲ್ಲಿ ಸೋಮವಾರ ಮುಂಜಾನೆ ೩೪೨ಕ್ಕೆ ಆಲೌಟಾದ ನಂತರ ಎರಡನೇ ದಿನದಾಟದ ಕೊನೆಯಲ್ಲಿ ಸೌರಾಷ್ಟ್ರ ತನ್ನ ಮೊದಲ ಸರದಿಯಲ್ಲಿ ೪ ವಿಕೆಟ್‌ಗಳಿಗೆ ೧೬೪ರ ಮೊತ್ತ…

Read More

ಶಿವಾಗಮಗಳು ಶಿವತತ್ವ ವಿವರಿಸಿದರೆ ವಚನಗಳು ಅನುಭವದ ಅರಿವು ಮೂಡಿಸುತ್ತವೆ: ಶ್ರೀ ರಂಭಾಪುರಿ ಜಗದ್ಗುರುಗಳು

ಜಮಖಂಡಿಶಿವಾಗಮಗಳಲ್ಲಿ ಶಿವತತ್ವ ಮತ್ತು ಧಾರ್ಮಿಕ ಆಚರಣೆಗಳನ್ನು ವಿವರಿಸಿದರೆ ವಚನಗಳು ಶಿವತತ್ವವನ್ನು ಜೀವನದ ಅನುಭವದೊಂದಿಗೆ ಬೆಸೆಯುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಸೋಮವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 9ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಶ್ರೀ ಗುರುವು ಅಜ್ಞಾನವನ್ನು ನಿವಾರಿಸಿ ಜ್ಞಾನದ ಬೆಳಕನ್ನು ನೀಡುವವನು. ಶಿಷ್ಯನಿಗೆ ಶಿವತತ್ವ ಲಿಂಗದ ಮಹತ್ವ ಆಧ್ಯಾತ್ಮಿಕ ಸಾಧನೆ ಮತ್ತು ನೈತಿಕ ಜೀವನ ಕುರಿತು ಮಾರ್ಗದರ್ಶನ ನೀಡುತ್ತಾನೆ. ಗುರು ಕೃಪೆಯಿಂದ ಶಿಷ್ಯನಲ್ಲಿ ಆತ್ಮವಿಶ್ವಾಸ ವಿವೇಕ…

Read More

ಸಂಗೀತ ಘರಾಣೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ: ಪಂ. ಎಂ. ವೆಂಕಟೇಶಕುಮಾರ

ಧಾರವಾಡಇಂದಿನ ವಿದ್ಯಾರ್ಥಿಗಳು ಸಂಗೀತ ಪರಂಪರೆ, ಘರಾಣೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಿದೆ. ಸಂಗೀತ ಕೇಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಹಿಂದೂಸ್ತಾನಿ ಗಾಯಕ ಪಂ. ಎಂ. ವೆಂಕಟೇಶಕುಮಾರ ಅಭಿಪ್ರಾಯಪಟ್ಟರು. ನಗರದ ಹಿರೇಮಲ್ಲೂರ ಈಶ್ವರನ್ ಮಹಾವಿದ್ಯಾಲಯದಲ್ಲಿ ಸ್ವರಸೇನ ಪಂ. ಸಂಗಮೇಶ್ವರ ಗುರವ ಸಂಗೀತ ಪ್ರತಿಷ್ಠಾನವು ಏರ್ಪಡಿಸಿದ್ದ ಪಂ. ಕೈವಲ್ಯಕುಮಾರ ಗುರವ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ತಂದೆ ಸ್ವರಸೇನ ಪಂ.ಸಂಗಮೇಶ್ವರ ಗುರವ ಅವರನ್ನೇ ಗುರುವಾಗಿಸಿಕೊಂಡ ಪಂ.ಕೈವಲ್ಯಕುಮಾರ ಅವರು ತಂದೆಯನ್ನೇ ಮೀರಿಸುವ ಹಾಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ…

Read More

ವಿವಾದಾತ್ಮಕ ಹೇಳಿಕೆಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹ

ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಸಮಾನ ಮನಸ್ಕರ ವೇದಿಕೆಯ ಗೆಳೆಯರ ಬಳಗ ಧಾರವಾಡಕಾಂಗ್ರೆಸ್ ಮುಖಂಡರ ವಿವಾದಾತ್ಮಕ ಹೇಳಿಕೆಗಳು ಹಾಗೂ ದೇಶದ ಭದ್ರತೆಗೆ ಸಂಬಂಧಿಸಿದಂತೆ ಕೇಳಿಬಂದಿರುವ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರೆಂದು ಸಾಬೀತಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಸಮಾನ ಮನಸ್ಕರ ವೇದಿಕೆಯ ಗೆಳೆಯರ ಬಳಗದ ವತಿಯಿಂದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸೋಮವಾರ ಸಲ್ಲಿಸಿದ ಮನವಿಯಲ್ಲಿ, ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು…

Read More

ಅದ್ಧೂರಿ ದಾಂಡಿಯಾ ಉತ್ಸವ

ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಏಕತೆ ಮೂಡಿಸುತ್ತವೆ: ಬಸವರಾಜ ಗುರಿಕಾರ ಧಾರವಾಡಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಪರಸ್ಪರ ಪ್ರೀತಿ, ಸ್ನೇಹ, ಸೌಹಾರ್ದತೆ ಹಾಗೂ ಏಕತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಖಿಲ್ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಪೇಡರೇಷನ್ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು. ನಗರದ ಕಲಾಶಕ್ತಿ ಫೌಂಡೇಶನ್ ಹಾಗೂ ಹೋಟೆಲ್ ಮಂದಾರ ರೀಜೆನ್ಸಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಕಲಾಶಕ್ತಿ ದಾಂಡಿಯಾ ಉತ್ಸವ–2026’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ…

Read More