ಧಾರವಾಡ ಜೆ.ಎಸ್.ಎಸ್. ಕಾಲೇಜು ಎರಡು ವರ್ಷಗಳ ನಂತರ ಮತ್ತೆ ಕ.ವಿ.ವಿ. ಮಹಿಳಾ ವಾಲಿಬಾಲ್ ಚಾಂಪಿಯನ್ !!

ಧಾರವಾಡಎರಡು ವರ್ಷಗಳ ಹಿಂದೆ ಪ್ರಶಸ್ತಿ ವಿಜೇತರಾಗಿ ಕಳೆದೆರಡು ವರ್ಷಗಳಿಂದ ರನ್ನರ್-ಅಪ್’ ಸ್ಥಾನಕ್ಕೇ ತೃಪ್ತಿ ಪಟ್ಟುಕೊಂಡಿದ್ದ ನಗರದ ಜೆ.ಎಸ್.ಎಸ್. ಕಾಲೇಜು ತಂಡ ಕರ್ನಾಟಕ ವಿಶ್ವವಿದ್ಯಾಲಯ ಮಹಿಳೆಯರ ಅಂತರ ಕಾಲೇಜು ವಾಲಿಬಾಲ್ ಪ್ರಶಸ್ತಿಯ ಮೇಲೆ ಮತ್ತೆ ತನ್ನ ಅಧಿಕಾರ ಜಮಾಯಿಸಿದೆ. ಟೂರ್ನಿಯಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಜಯಿಸಿದ ಸುಷ್ಮಾ ಬೆಂಗೇರಿ ಹಾಗೂ ಬೆಸ್ಟ್ ಪಾಸರ್’ ಪ್ರಶಸ್ತಿಯನ್ನು ಬಾಚಿಕೊಂಡ ಕಾವೇರಿ ಬಡಿಗೇರ ಅವರ ಭರ್ಜರಿ ಆಟದ ನೆರವಿನಿಂದ ಜೆ.ಎಸ್.ಎಸ್. ಕಾಲೇಜು ತಂಡ ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಎಸ್.ಡಿ.ಎಂ. ಕಾಲೇಜು ಆಶ್ರಯದಲ್ಲಿ ಶುಕ್ರವಾರ ನಡೆದ…

Read More

ಭಾರತಕ್ಕೆ ಜಿಂಬಾಬ್ವೆ ಎದುರು ಪ್ರಯಾಸದ ಗೆಲುವು, ಕನ್ನಡತಿ ನಿಕಿ ಪ್ರಸಾದ್‌ಗೆ ಸ್ಮರಣಿಯ ಚೊಚ್ಚಲ ಪಂದ್ಯ

ರಾಯಪುರಅನುಭವಿ ದೀಪ್ತಿ ಶರ್ಮಾ ಹಾಗೂ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದ ಕನ್ನಡತಿ ನಿಕಿ ಪ್ರಸಾದ ಅವರ ನಡುವಿನ ಸಮಯೋಚಿತ ಜೊತೆಯಾಟದ ನೆರವಿನಿಂದ ಭಾರತ ಶುಕ್ರವಾರ ನಡೆದ ಮೊದಲ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆ ತಂಡವನ್ನು ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ ೧-೦ ಮುನ್ನಡೆ ಸಾಧಿಸಿತು. ಶಹೀದ ವೀರ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಗೆಲ್ಲಲು ಕೇವಲ ೧೧೫ ರನ್ ಮಾತ್ರ ಗಳಿಸಬೇಕಿದ್ದ ಭಾರತಕ್ಕೆ ಬ್ಯಾಟಿಂಗ್ ಆರಂಭಿಸಿದಾಗ ಆಘಾತ ಕಾದಿತ್ತು. ನಿಯಾಶಾ ಗ್ವಾಂಜುರಾ(೩/೧೮) ಮಾರಕ ದಾಳಿಯ ಎದುರು ೩.೧…

Read More

ಭಾವೈಕ್ಯತೆ-ಆಧ್ಯಾತ್ಮ ಜ್ಞಾನ ಭಾರತದ ಉಸಿರು: ಶ್ರೀ ರಂಭಾಪುರಿ ಜಗದ್ಗುರುಗಳು

ಜಮಖಂಡಿಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಸತ್ಯ ಶಾಂತಿಯ ಬದುಕಿಗೆ ಆದರ್ಶ ಮೌಲ್ಯಗಳ ಪರಿಪಾಲನೆ ಮುಖ್ಯ. ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು ಆಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶುಕ್ರವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಆರನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಾನವ ಪರಿಪೂರ್ಣದೆಡೆಗೆ ಸಾಗುವುದೇ ನಿಜವಾದ ಧರ್ಮ. ಸತ್ಯ ಪ್ರಾಮಾಣಿಕತೆಗಿಂತ ಹೆಚ್ಚು ಉದಾತ್ತವಾದ ಧರ್ಮ ಇನ್ನೊಂದಿಲ್ಲ….

Read More

ವಿಧಾನ ಪರಿಷತ್ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ

ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ; ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗದಗರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಪಶ್ಚಿಮ ಪದವೀಧರ ಕ್ಷೇತ್ರ ಸೇರಿದಂತೆ ನಾಲ್ಕೂ ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಅಭ್ಯರ್ಥಿ ಸಂಕನೂರು ಅವರ ಪರವಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಚಿವರು ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯ…

Read More

ನವರಾತ್ರಿ ಉತ್ಸವ: ಕರಿಯಮ್ಮ ದೇವಸ್ಥಾನದಲ್ಲಿ ಕುಂಕುಮಾರ್ಚಣೆ

ಧಾರವಾಡನವರಾತ್ರಿ ಉತ್ಸವದ ಆರನೆಯ ದಿನ ಹಾಗೂ ಶುಭ ಶುಕ್ರವಾರವಾದಂದು ಶಾಂತಿ ನಿಕೇತನ ನಗರದ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ಸುಮಗಂಲೆಯರಿಂದ ಸಾಮೂಹಿಕ ಕುಂಕುಮಾರ್ಚಣೆ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ದೇವಿಯ ಸಹಸ್ರ ನಾಮವನ್ನು ಜಪಿಸುತ್ತಾ ದೇವಿಯ ಪಾದಗಳಿಗೆ ಶುದ್ಧವಾದ ಕುಂಕಮ ಸಮರ್ಪಿಸಿದರು. ಕುಟುಂಬದಲ್ಲಿ ಶಾಂತಿ, ನೆಮ್ಮದಿ ಮತ್ತು ಸಂತೋಷ ಸದಾ ಇರಲಿ. ಸಮಾಜದಲ್ಲಿ ಸಾಮರಸ್ಯ ಒಡಮೂಡಲಿ. ಲೋಕ ಕಲ್ಯಾಣದ ಜೊತೆಗೆ ಅಭಿವೃದ್ಧಿಯ ಫಲ ಸರ್ವರಿಗೂ ತಲುಪವಂತಾಗಲಿ ಎಂದು ಕುಂಕುಮಾರ್ಚಣೆಯಲ್ಲಿ ಭಾಗವಹಿಸಿದ್ದ ಸುಮಗಂಲೆಯರು ದೇವಿಯಲ್ಲಿ ಪ್ರಾರ್ಥಿಸಿದರು. ದೇವಸ್ಥಾನದ ಅರ್ಚಕ…

Read More

ಕೆ.ಎಸ್.ಸಿ.ಎ. ಧಾರವಾಡ ವಲಯ ೧೪ ವರ್ಷದವರೊಳಗಿನ ಕ್ರಿಕೆಟ್: ಎರಡು ದಿನಗಳ ಅಂತರದಲ್ಲಿ ಎರಡು ದ್ವಿಶತಕದ ಜೊತೆಯಾಟಗಳು

• ರಘುಸುತಹುಬ್ಬಳ್ಳಿಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಧಾರವಾಡ ವಲಯದ ೧೪ ವರ್ಷದವರೊಳಗಿನ ಅಂತರ-ಕ್ಲಬ್ ಕ್ರಿಕೆಟ್ ಟೂರ್ನಿ ಬಿರುಸಿನಿಂದ ನಡೆದಿದ್ದು ಪುಟಾಣಿ ಬ್ಯಾಟರ್‌ಗಳ ಅಬ್ಬರ ಜೋರಾಗಿದೆ. ಒಂದೆಡೆ ಟರ್ಫ್ ವಿಕೆಟ್‌ಗಳ ಮೇಲೆ ಆಡಿ ರೂಢಿಯಿರದ ಹುಡುಗರಿಂದ ಕೂಡಿರುವ ತಂಡಗಳು ನೂರರ ಮೊತ್ತವನ್ನೂ ದಾಟಲು ಪರದಾಡುತ್ತಿದ್ದರೆ, ಇನ್ನೊಂದೆಡೆ ಉತ್ತಮ ತರಬೇತಿ ಪಡೆದಿರುವ, ವೃತ್ತಿ ನಿರತರಂತೆ ಆಡುತ್ತಿರುವ ಎಳೆಯ ಪ್ರತಿಭಾನ್ವಿತ ಬ್ಯಾಟರ್‌ಗಳು ಅಬ್ಬರಿಸುತ್ತಿದ್ದಾರೆ. ಒಂದು ಕಾಲವಿತ್ತು….ಗ್ರಾಮೀಣ ಭಾಗಗಳಲ್ಲಿ ವೈಯಕ್ತಿಕ ಶತಕಗಳಷ್ಟೇ ಅಲ್ಲ, ಶತಕದ ಜೊತೆಯಾಟಗಳು ದಾಖಲಾಗುವುದೂ ದುಸ್ತರವಿತ್ತು. ಈಗ ಕಾಲ ಬದಲಾಗಿದೆ….

Read More

ರಾಷ್ಟ್ರದ ಉಜ್ವಲ ಭವಿಷ್ಯಕ್ಕೆ ಯೋಧ-ರೈತರ ಕೊಡುಗೆ ಅಮೂಲ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಜಮಖಂಡಿದೇಶದ ಪ್ರಗತಿ ಕೇವಲ ಸರಕಾರದಿಂದ ಸಾಧ್ಯವಿಲ್ಲ. ಸೈನಿಕರು ರೈತರು ಶಿಕ್ಷಕರು ಕಾರ್ಮಿಕರು ವಿಜ್ಞಾನಿಗಳು ವೈದ್ಯರು ಮತ್ತು ಉದ್ಯಮಿಗಳ ಶ್ರಮ ಸಾಧನೆ ಮುಖ್ಯ. ರಾಷ್ಟ್ರ ನಿರ್ಮಾಣದಲ್ಲಿ ಇವರೆಲ್ಲರ ಪಾತ್ರ ಬಹಳ ದೊಡ್ಡದು. ಅದರಲ್ಲಿ ವಿಶೇಷವಾಗಿ ಯೋಧರ ಮತ್ತು ರೈತರ ಕೊಡುಗೆ ಅಮೂಲ್ಯವಾದದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಗುರುವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಐದನೇ ದಿನದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಮನುಷ್ಯ ಜೀವನದಲ್ಲಿ ದೊಡ್ಡ ಸ್ಥಾನವನ್ನು ಗಳಿಸುವುದು ಉತ್ತಮ…

Read More

ನಿತ್ಯ ರುದ್ರ ಪಠಣದಿಂದ ದುಷ್ಟ ಬಾಧೆ ದೂರ

ಶ್ರೀಸಿದ್ಧಾರೂಢ ರುದ್ರ ಬಳಗದ ಮಾರ್ಗದರ್ಶಕಿ ವೇದಮಾತೆ ಮಂಗಳಾ ಮಠದ ಅವರಿಗೆ ಗುರುವಂದನೆ ಧಾರವಾಡನಿತ್ಯ ರುದ್ರ ಪಠಣದಿಂದ ದುಷ್ಟ ಬಾಧೆ ದೂರವಾಗಿ ಧನಾತ್ಮಕ ಶಕ್ತಿಸಂಚಯ ಅಧಿಕಗೊಳ್ಳುತ್ತದೆ ಎಂದು ಶ್ರೀಸಿದ್ಧಾರೂಢ ರುದ್ರ ಬಳಗದ ಮಾರ್ಗದರ್ಶಕಿ ವೇದಮಾತೆ ಮಂಗಳಾ ಮಠದ ಹೇಳಿದರು. ನಗರದ ರೆವ್ಹೆನ್ಯೂ ಕಾಲನಿಯ ಶ್ರೀಸಿದ್ಧಾರೂಢ ಮಠದಲ್ಲಿ ಶ್ರೀಸಿದ್ಧಾರೂಢ ರುದ್ರ ಬಳಗದ ಸದಸ್ಯರು ತಮಗೆ ನೀಡಿದ ಗುರುವಂದನೆಯ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ರುದ್ರ ಪಠಣವು ಸಮಷ್ಟಿ ನಿಷ್ಟವಾದದ್ದು. ರುದ್ರ ಪಠಣದ ಫಲಶೃತಿ ಯಾರನ್ನೋ ನಿರ್ದಿಷ್ಟವಾಗಿ ಕೆಲವರನ್ನಷ್ಟೇ ಕೇಂದ್ರೀಕರಿಸದೇ ಸಲಕರಿಗೂ ಕ್ಷೇಮವನ್ನು…

Read More

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ: ಶಿವಾಜಿ ಕಾಲೇಜಿಗೆ ನಾಲ್ಕು ಪದಕ

ಧಾರವಾಡಮೈಸೂರಿನಲ್ಲಿ ನಡೆದ ದಸರಾ ರಾಜ್ಯಮಟ್ಟದ ಸಿಎಂ ಟ್ರೋಫಿ ಅಥ್ಲೆಟಿಕ್ಸ್ ಕೂಟದಲ್ಲಿ ಮರಾಠಾ ವಿದ್ಯಾಪ್ರಸಾರಕ ಮಂಡಳದ ಶ್ರೀ ಶಿವಾಜಿ ಛತ್ರಪತಿ ಮಹಾರಾಜ ಪದವಿಪೂರ್ವ ಮತ್ತು ಪದವಿ ಕಾಲೇಜಿನ ನಾಲ್ವರು ಕ್ರೀಡಾಪಟುಗಳು ಪದಗಳ ಸಾಧನೆ ಮಾಡಿದ್ದಾರೆ. ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾಹಿತ್ಯ ಪವಾರ ಕಂಚಿನ ಪದಕ, ಕುಸ್ತಿಯಲ್ಲಿ ಶಿವಪ್ಪ ಅಲಬಾಳ ಬೆಳ್ಳಿ ಪದಕ ಹಾಗೆಯೇ ೧೦ ಸಾವಿರ ಮೀಟರ್ ಓಟದಲ್ಲಿ ಪದವಿ ಕಾಲೇಜಿನ ರಮೇಶ ಬಳ್ಳಿಗಟ್ಟಿ ಕಂಚಿನ ಪದಕ ಪಡೆದಿದ್ದಾನೆ. ಅಲ್ಲದೇ, ಬಲ್ಲೆ ಎಸೆತ ಸ್ಪರ್ಧೆಯಲ್ಲಿ…

Read More

ರಣಜಿ: ಕರುಣ್ ಹೋರಾಟದ ಶತಕ, ಸೋಲಿನಿಂದ ಪಾರಾದ ಹಾಲಿ ರನ್ನರ್-ಅಪ್’ ಕರ್ನಾಟಕ

ಮಲಪಾಡು(ವಿಜಯವಾಡ)ಒಂದು ಹಂತದಲ್ಲಿ ಸೋಲಿನ ಭೀತಿಯಲ್ಲಿದ್ದ ಕರ್ನಾಟಕಕ್ಕೆ, ಅನುಭವಿ ಬ್ಯಾಟರ್ ಕರುಣ್ ನಾಯರ್ ಅವರ ಹೋರಾಟದ ಶತಕ ಆಸರೆಯಾಯಿತು. ಆಂಧ್ರಕ್ಕೆ ಮೊದಲ ಸರದಿಯ ಮುನ್ನಡೆಯ ಆಧಾರದ ಮೇಲೆ ೩ ಪಾಯಿಂಟ್ ಬಿಟ್ಟಕೊಟ್ಟ ರಣಜಿ ಟ್ರೋಫಿ ಪಂದ್ಯಾವಳಿಯ ಕಳೆದ ಸಲದ ರನ್ನರ್-ಅಪ್’ ಕರ್ನಾಟಕ ನಾಲ್ಕು ದಿನಗಳ ಮೊದಲ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಂಡು ೧ ಪಾಯಿಂಟ್‌ನಿಂದ ಸಮಾಧಾನ ಪಟ್ಟುಕೊಂಡಿತು. ಇಲ್ಲಿಯ ಆಂಧ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ತನ್ನ ಎರಡನೇ ಸರದಿಯ ಆಟ ಮುಂದುವರಿಸಿದ ಕರ್ನಾಟಕ ನಾಯಕ ಸ್ಮರಣ್ ರವಿಚಂದ್ರನ್(೨೧)…

Read More