ಜ್ಞಾನ ಪ್ರಸಾರಕ್ಕೆ ವಿಶ್ವೇಶ್ವರ ಜಗದ್ಗುರುಗಳ ಕೊಡುಗೆ ಅಪಾರ

ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಪೀಠದಲ್ಲಿ ಲಿಂಗೈಕ್ಯ ಜಗದ್ಗುರುಗಳ 37ನೇ ಪುಣ್ಯಸ್ಮರಣೆ ವಾರಾಣಸಿ(ಉ.ಪ್ರ.)ಕಾಶಿ ಪೀಠದ 85ನೇ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರು ಹೆಸರಿಗೆ ತಕ್ಕಂತೆ ಇಡೀ ವಿಶ್ವವನ್ನೇ ಪ್ರೀತಿಸುತ್ತಿದ್ದು, ಜ್ಞಾನ ಪ್ರಸಾರಕ್ಕೆ ಅದರಲ್ಲೂ ಮುಖ್ಯವಾಗಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅವರು ನೀಡಿದ ಕೊಡುಗೆ ಅಪಾರ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು. ಕಾಶಿ ಪೀಠದಲ್ಲಿ ನಡೆದ ಲಿಂಗೈಕ್ಯ ಜಗದ್ಗುರು ವಿಶ್ವೇಶ್ವರ…

Read More

ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲ್ಯ ಬೆಳೆಸಿಕೊಳ್ಳಲಿ: ಡಾ. ಅಜಿತ ಪ್ರಸಾದ

ಧಾರವಾಡವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯೇ ಶಿಕ್ಷಣ ಸಂಸ್ಥೆಗಳ ಮುಖ್ಯ ಧ್ಯೇಯವಾಗಬೇಕು. ಪಠ್ಯ ಶಿಕ್ಷಣದ ಜೊತೆಗೆ ಆಧುನಿಕ ತಂತ್ರಜ್ಞಾನ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯ ಎಂದು ಜೆ.ಎಸ್.ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು. ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಎಂ.ಸಿ.ಎ. ಸಂಸ್ಥೆಗೆ ೨೦೨೬–೨೭ನೇ ಸಾಲಿಗೆ ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ದೀಕ್ಷಾ ಬೋಧ ಸಮಾರಂಭ ಹಾಗೂ ಎರಡು ದಿನಗಳ ಓರಿಯೆಂಟೇಶನ್ ಕಾರ್ಯಕ್ರಮದ ಉದ್ಘಾಟನೆ ಮತ್ತು ತರಬೇತಿ ಪೂರ್ಣಗೊಳಿಸಿದ ದ್ವಿತೀಯ ವರ್ಷದ…

Read More

ಕೃಷಿ ಅಭಿವೃದ್ಧಿಯೇ ಗ್ರಾಮೀಣ ಅಭಿವೃದ್ಧಿಯ ಅಡಿಪಾಯ: ಶ್ರೀ ರಂಭಾಪುರಿ ಜಗದ್ಗುರುಗಳು

ಜಮಖಂಡಿಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಕೃಷಿಯು ನಮ್ಮ ದೇಶದ ಆರ್ಥಿಕತೆ ಆಹಾರ ಭದ್ರತೆ ಉದ್ಯೋಗ ಮತ್ತು ಗ್ರಾಮೀಣ ಜೀವನದ ಪ್ರಮುಖ ಆಧಾರವಾಗಿದೆ. ಗ್ರಾಮೀಣ ಅಭಿವೃದ್ಧಿಯು ದೇಶದ ಸಮಗ್ರ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಕೃಷಿಯ ಅಭಿವೃದ್ಧಿಯಿಂದ ಗ್ರಾಮೀಣ ಅಭಿವೃದ್ಧಿಗೆ ಅಡಿಪಾಯ. ಗ್ರಾಮೀಣ ಅಭಿವೃದ್ಧಿಯೇ ರಾಷ್ಟ್ರದ ಸಮಗ್ರ ಬೆಳವಣಿಗೆಗೆ ಸಹಕಾರಿ ಆಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಬುಧವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ನಾಲ್ಕನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು,…

Read More

ರಣಜಿ: ಹಾಲಿ ರನ್ನರ್-ಅಪ್ ಕರ್ನಾಟಕಕ್ಕೆ ಸೋಲಿನ ಆತಂಕ, ಮತ್ತೆ ಕರುಣ್ ಆಸರೆ, ಶಿಖರ್‌ಗೆ ೬ ವಿಕೆಟ್

ಮಲಪಾಡು(ವಿಜಯವಾಡ)ಕರ್ನಾಟಕದ ಅಗ್ರ ಪಂಕ್ತಿಯ ಬ್ಯಾಟಿಂಗ್‌ನಲ್ಲಿ ಮತ್ತೆ ಕುಸಿತ ಕಂಡಿದ್ದು, ಕಳೆದ ರಣಜಿ ಋತುವಿನಲ್ಲಿ ರನ್ನರ್-ಅಪ್ ಸ್ಥಾನದೊಂದಿಗೆ ಬೀಗಿದ್ದ ರಾಜ್ಯ ತಂಡ ಹೊಸ ಋತುವಿನ ಮೊದಲ ಪಂದ್ಯದಲ್ಲೇ ಸೋಲಿನ ಆತಂಕದಲ್ಲಿದೆ. ಆಂಧ್ರದ ಎದುರು ಇಲ್ಲಿ ನಡೆದಿರುವ ಎಲೀಟ್ ಗುಂಪಿನ ನಾಲ್ಕು ದಿನಗಳ ಪಂದ್ಯದ ಮೂರನೇ ದಿನದ ಕೊನೆಗೆ ತನ್ನ ಎರಡನೇ ಸರದಿಯ ಆರು ವಿಕೆಟ್‌ಗಳನ್ನು ಉಳಿಸಿಕೊಂಡಿರುವ ಕರ್ನಾಟಕ ಬುಧವಾರದ ಇಡೀ ದಿನದಾಟ ಬಾಕಿಯಿರುವಂತೆ ಕೇವಲ ೩೨ ರನ್‌ಗಳಿಂದ ಮಾತ್ರ ಮುಂದಿದೆ. ೧೪೪ ರನ್ ಲೀಡ್:ಮಂಗಳವಾರ ಮುಂಜಾನೆ ೬ ವಿಕೆಟ್‌ಗಳಿಗೆ…

Read More

ಸಂಸ್ಕಾರವಂತ ನಾಗರಿಕರೇ ರಾಷ್ಟ್ರದ ನಿಜವಾದ ಸಂಪತ್ತು: ಶ್ರೀ ರಂಭಾಪುರಿ ಜಗದ್ಗುರುಗಳು

ಜಮಖಂಡಿಸಂಸ್ಕಾರವಂತ ವ್ಯಕ್ತಿಗಳೇ ಸುಸಂಸ್ಕೃತ ಸಮಾಜದ ಅಡಿಪಾಯ. ಸಂಸ್ಕಾರವಂತ ವ್ಯಕ್ತಿ ಸಮಾಜದ ಶಕ್ತಿ. ಸಂಸ್ಕಾರವಂತ ಸಮಾಜ ರಾಷ್ಟ್ರದ ಶಕ್ತಿ. ಉತ್ತಮ ನಡತೆ ಶಿಸ್ತು ಪ್ರಾಮಾಣಿಕತೆ ಹಿರಿಯರ ಮೇಲಿನ ಗೌರವ ದೇಶಪ್ರೇಮ ಮತ್ತು ಸಮಾಜ ಸೇವೆಯ ಮನೋಭಾವನೆಯನ್ನು ರೂಪಿಸುವಲ್ಲಿ ಸಂಸ್ಕಾರಗಳು ಮಹತ್ವ ಪಾತ್ರ ವಹಿಸುತ್ತವೆ. ಸಂಸ್ಕಾರವಂತ ನಾಗರಿಕರೇ ರಾಷ್ಟ್ರದ ನಿಜವಾದ ಸಂಪತ್ತು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಮಂಗಳವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಮೂರನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ…

Read More

ಕೆಪಿಎಸ್‌ಸಿ ನೇಮಕಾತಿ ಹಗರಣ: ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಕಲಬುರಗಿಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರ, ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಲು ಪ್ರಕರಣವನ್ನು ರಾಜ್ಯ ಪೊಲೀಸ್ ಇಲಾಖೆಯ ಸಿಐಡಿಯಿಂದ ಕೇಂದ್ರ ತನಿಖಾದಳಕ್ಕೆ(ಸಿಬಿಐ) ವರ್ಗಾಯಿಸಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು(ಪಿಐಎಲ್) ಸೋಮವಾರ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಸಲ್ಲಿಸಲಾಗಿದೆ. ಬೀದರ್ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಶರಣಪ್ಪ ಎಂಬುವರು ಸಂವಿಧಾನದ 226ನೇ ವಿಧಿಯಡಿ ಈ ಪಿಐಎಲ್ ಸಲ್ಲಿಸಿದ್ದಾರೆ. ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳಿಗೆ ಸಂಬoಧಿಸಿದ ಕೇಸುಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. 1995ರಿಂದ 2026ರವರೆಗಿನ ಕೆಪಿಎಸ್‌ಸಿ…

Read More

ಈಶಾನ್ಯ ಶಿಕ್ಷಕರ ಕ್ಷೇತ್ರ: ನಮೋಶಿ-ಮಟ್ಟೂರ ಮಧ್ಯೆ ಜಂಗಿಕುಸ್ತಿ

ಉರಿ ಬಿಸಿಲಲ್ಲೂ ಬಿರುಸಿನ ಪ್ರಚಾರ, ಶಿಕ್ಷಕರ ಮನಗೆಲ್ಲಲು ಕಸರತ್ತು • ಶ್ರೀಕಾಂತ ಬೆಟಗೇರಿಕಲಬುರಗಿವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಹತ್ತು ದಿನಗಳಷ್ಟೇ ಬಾಕಿ ಉಳಿದಿದ್ದು, ಉರಿ ಬಿಸಿಲಲ್ಲೂ ಬಿರುಸಿನ ಪ್ರಚಾರ ನಡೆಯುತ್ತಲಿದೆ. ಮತದಾರರ ಓಲೈಕೆಗಾಗಿ ಕಸರತ್ತು ತೀವ್ರಗೊಂಡಿರುವುದರಿಂದ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿಯಿಂದ ಶಶೀಲ್ ನಮೋಶಿ ಹಾಗೂ ಕಾಂಗ್ರೆಸ್‌ನಿಂದ ಶರಣಪ್ಪ ಮಟ್ಟೂರ ಕಣಕ್ಕಿಳಿದಿದ್ದು, ಇದು ಇವರಿಬ್ಬರ ನಡುವಿನ ಸತತ ಮೂರನೇ ನೇರ ಹಣಾಹಣಿಯಾಗಿದೆ. 2014ರಲ್ಲಿ ಮೊದಲ ಬಾರಿಗೆ ಎದುರಾಳಿಗಳಾದಾಗ ಮಟ್ಟೂರ ಗೆಲ್ಲುವ ಮೂಲಕ…

Read More

ರಾಹುಲ್ ಶತಕ, ರೇವಂತ ಜೊತೆ ದ್ವಿಶತಕದ ಜೊತೆಯಾಟ, ಆಂಧ್ರಕ್ಕೆ ಮಹತ್ವದ ಲೀಡ್

ಮಲಪಾಡು(ವಿಜಯವಾಡ)ಆರನೇ ಕ್ರಮಾಂಕದ ಬ್ಯಾಟರ್ ಶ್ರೀರಾಮ ವೆಂಕಟ ರಾಹುಲ್ ಅವರ ಸಮಯೋಚಿತ ಶತಕ ಹಾಗೂ ರೇವಂತ ರೆಡ್ಡಿ ಅವರ ಜೊತೆಗಿನ ಆರನೇ ವಿಕೆಟ್‌ಗೆ ಭರ್ಜರಿ ದ್ವಿಶತಕದ ಜೊತೆಯಾಟದ ನೆರವಿನಿಂದ ಆತಿಥೇಯ ಆಂಧ್ರ ಇಲ್ಲಿ ನಡೆದಿರುವ ರಣಜಿ ಟ್ರೋಫಿ ಎಲೀಟ್ ಗುಂಪಿನ ಪಂದ್ಯದಲ್ಲಿ ಕಳೆದ ಸಲದ ರನ್ನರ್-ಅಪ್’ ಕರ್ನಾಟಕದ ಮೇಲೆ ಮಹತ್ವದ ಮೊದಲ ಇನ್ನಿಂಗ್ಸ್ ಲೀಡ್ ಸಂಪಾದಿಸಿತು. ಆಂಧ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಪಂದ್ಯದ ಮೊದಲ ದಿನವಾಗಿದ್ದ ಭಾನುವಾರದಂದು ಕರ್ನಾಟಕ ತನ್ನ ಮೊದಲ ಸರದಿಯಲ್ಲಿ ೨೭೪ಕ್ಕೆ ಆಲೌಟಾದ ನಂತರ ಎರಡನೇ…

Read More

ಸರ್ಫಾಕೋಟ್ಸ್ ಪೇಂಟ್ಸ್ 3 ಹೊಸ ಉತ್ಪನ್ನ ಬಿಡುಗಡೆ

ದಾಂಡೇಲಿಯಲ್ಲಿ ನಡೆದ ಸರ್ಫಾಕೋಟ್ಸ್ ಪೇಂಟ್ಸ್ ಕಂಪನಿಯ ಹೊಸ ಪ್ರಾಡಕ್ಟ್‌ಗಳ ಬಿಡುಗಡೆ ಕಾರ್ಯಕ್ರಮಕ್ಕೆ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಯು. ಪ್ರಶಾಂತ್ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ದಾಂಡೇಲಿದೇಶದ ಮುಂಚೂಣಿಯ ಪೇಂಟ್‌ಗಳಲ್ಲೊಂದಾದ ಸರ್ಫಾಕೋಟ್ಸ್ ಪೇಂಟ್ಸ್ ಕಂಪನಿಯ ಮೂರು ಹೊಸ ಪ್ರಾಡಕ್ಟ್ ಗಳನ್ನು ದಾಂಡೇಲಿಯ ವಿಸ್ಲಿಂಗ್ ವುಡ್ಸ್ ರೆಸಾರ್ಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಯು. ಪ್ರಶಾಂತ್, ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ಹಿರಿಯ ಏರಿಯಾ ಸೇಲ್ಸ್ ಮ್ಯಾನೇಜರ್ ಶ್ರೀಧರ…

Read More

ಅಂತರಂಗ-ಬಹಿರಂಗ ಶುದ್ದಿ ವೀರಶೈವ ಧರ್ಮದ ಗುರಿ: ಶ್ರೀ ರಂಭಾಪುರಿ ಜಗದ್ಗುರುಗಳು

ಜಮಖಂಡಿಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಮತ ಧರ್ಮಗಳು ಬೆಳೆದುಕೊಂಡು ಬಂದಿವೆ. ಇವುಗಳಲ್ಲಿ ಒಂದಾಗಿರುವ ವೀರಶೈವ ಧರ್ಮವು ಒಂದು. ಇದರ ಇತಿಹಾಸ ಮತ್ತು ಬೆಳೆದುಕೊಂಡು ಬಂದ ಪರಂಪರೆ ಅತ್ಯಂತ ಪ್ರಾಚೀನವಾದುದು. ಅಂತರಂಗ ಮತ್ತು ಬಹಿರಂಗ ಶುದ್ದಿಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟ ಧರ್ಮ ವೀರಶೈವ ಧರ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಸೋಮವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಎರಡನೇ ದಿನದ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಯುಗ ಯುಗಗಳ ಪ್ರಾಚೀನ…

Read More