ರಣಜಿ: ಕುಸಿದ ಕರ್ನಾಟಕಕ್ಕೆ ಮನ್ವಂತ್ ಕುಮಾರ ಆಸರೆ
ಹಂಚಿಕೊಳ್ಳಿಬೆಂಗಳೂರುಮಳೆಯಲ್ಲಿ ಮಿಂದು ಒಣಗಿದ್ದ ಆಲೂರು ಮೈದಾನದಲ್ಲಿ ಸೌರಾಷ್ಟ್ರ ಎದುರು ಕುಸಿದಿದ್ದ ಆತಿಥೇಯ ಕರ್ನಾಟಕಕ್ಕೆ ಮನ್ವಂತ್ ಕುಮಾರ್ ತಮ್ಮ ಚೇತೋಹಾರಿ ಬ್ಯಾಟಿಂಗ್‌ನಿಂದ ಆಸರೆಯಾದರು. ನಾಲ್ಕು ದಿನಗಳ ಎಲೀಟ್ ಗುಂಪಿನ ರಣಜಿ ಟ್ರೋಫಿ ಪಂದ್ಯದ ಮೊದಲ ದಿನದ ಕೊನೆಯಲ್ಲಿ ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕರ್ನಾಟಕ ೮೬ ಓವರ್‌ಗಳ ಆಟದಲ್ಲಿ ೮ ವಿಕೆಟ್‌ಗಳ ನಷ್ಟಕ್ಕೆ ಗೌರವಯುತವಾದ ೨೮೨ರ ಮೊತ್ತ ತಲುಪಿತ್ತು. ಚಹ ವಿರಾಮಕ್ಕೂ ಮೊದಲು ೧೯೪ರ ಮೊತ್ತದಲ್ಲಿ ಕರ್ನಾಟಕ ಎಂಟನೇ ವಿಕೆಟ್ ಕಳೆದುಕೊಂಡಾಗ ಇನ್ನೂರರ ಗಡಿ ದಾಟುವ ಅವಕಾಶವನ್ನೂ ಅದಕ್ಕೆ…
