ಸೌರವ್ ಗಂಗೂಲಿ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್

ಹಂಚಿಕೊಳ್ಳಿ

ಹಂಚಿಕೊಳ್ಳಿನವದೆಹಲಿಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಮುಂದಿನ ಆವೃತ್ತಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಸೌರವ ಗಂಗೂಲಿ ೨೦೧೯ರಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದರೂ ಅದರ ಫ್ರೆಂಚೈಸಿಯೊಂದಿಗೆ ಇದು ಅವರ ಮೊದಲ ಅಧಿಕೃತ ಕೋಚಿಂಗ್ ಪಾತ್ರವಾಗಿದೆ. ತಂಡದ ಸಲಹೆಗಾರರಾಗಿ ಆಗ ತಂಡವನ್ನು ಸೇರಿಕೊಂಡಿದ್ದ ಅವರು ನಂತರ ಅದರ ಪುರುಷ ಹಾಗೂ ಮಹಿಳಾ ತಂಡಗಳ ಕ್ರಿಕೆಟ್ ನಿರ್ದೇಶಕರದೂ ಸೇರಿ ಹಲವಾರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಮುಖ್ಯ…


ಹಂಚಿಕೊಳ್ಳಿ
Read More

ಮತ್ತೆ ಜಪಾನ್ ಓಪನ್ ಕಿರೀಟ ಧರಿಸಿದ ಕಾರ್ಲೋಸ್ ಅಲ್ಕರಾಜ್

ಹಂಚಿಕೊಳ್ಳಿ

ಹಂಚಿಕೊಳ್ಳಿಟೋಕಿಯೋಅಗ್ರ ಸೀಡ್ ಸ್ಪೇನಿನ ಕಾರ್ಲೋಸ್ ಅಲ್ಕರಾಜ್ ಜಪಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕಳೆದ ಬಾರಿ ತಾವು ಜಯಿಸಿದ್ದ ಪುರುಷರ ಸಿಂಗಲ್ಸ್ ಪ್ರಶಸ್ತಿ ಉಳಿಸಿಕೊಂಡಿದ್ದಾರೆ. ಇಲ್ಲಿಯ ಅರಿಯಾಕೆ ಕೊಲಿಸಿಯಂನಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಹೋರಾಟದಲ್ಲಿ ಏಳು ಬಾರಿಯ ಗ್ರಾö್ಯನ್ ಸ್ಲಾಮ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಜೆಕ್ ರಿಪಬ್ಲಿಕ್‌ನ ಜಿರಿ ಲೆಹೆಕಾ ಅವರನ್ನು ಎರಡು ನೇರ ಸೆಟ್‌ಗಳಲ್ಲಿ ೭-೬(೪), ೬-೪ ಅಂತರದಿಂದ ಸೋಲಿಸಿದರು. ಪಂದ್ಯದ ಆರಂಭದಲ್ಲಿಯೇ ಸರ್ವಿಸ್ ಕಳೆದುಕೊಂಡಿದ್ದ ಅಲ್ಕರಾಜ್ ಮೊದಲ ಸೆಟ್‌ನಲ್ಲಿ ಸಾಕಷ್ಟು ಪರದಾಡಿದರಾದರೂ, ೯೬ ನಿಮಿಷಗಳ ಹೋರಾಟದಲ್ಲಿ…


ಹಂಚಿಕೊಳ್ಳಿ
Read More

ಅಲ್ಕರಾಜ್-ಲೆಹೆಕಾ ಜಪಾನ್ ಓಪನ್ ಟೆನಿಸ್ ಫೈನಲ್‌ಗೆ

ಹಂಚಿಕೊಳ್ಳಿ

ಹಂಚಿಕೊಳ್ಳಿಟೋಕಿಯೋಏಳು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಹಾಗೂ ಅಗ್ರ ಸೀಡ್ ಸ್ಪೇನಿನ ಕಾರ್ಲೋಸ್ ಅಲ್ಕರಾಜ್ ಇಲ್ಲಿ ನಡೆದಿರುವ ಜಪಾನ್ ಓಪನ್ ಟೆನಿಸ್ ಟೂರ್ನಿ ಫೈನಲ್ ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್ ಹಾಗೂ ವಿಶ್ವದ ೩ನೇ ಕ್ರಮಾಂಕದ ಆಟಗಾರ ಅಲ್ಕರಾಜ್, ಸೋಮವಾರ ಅರಿಯಾಕೆ ಕೊಲಿಸಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ದೇಶದವರೇ ಆದ ಜಾಮೆ ಮುನಾರ್ ಅವರನ್ನು ಮೂರು ಸೆಟ್‌ಗಳ ಸೆಣಸಟದಲ್ಲಿ ೫-೭, ೬-೩, ೬-೧ ಅಂತರದಿಂದ ಸೋಲಿಸಿದರು. ಫ್ರಶಸ್ತಿ ಹೋರಾಟದಲ್ಲಿ ಅಲ್ಕರಾಜ್ ಜೆಕ್ ರಿಪಬ್ಲಿಕ್‌ನ ಜಿರಿ ಲೆಹೆಕಾ ಅವರನ್ನು…


ಹಂಚಿಕೊಳ್ಳಿ
Read More

ಐಚಿ-ನಾಗೋಯಾ ಏಷ್ಯನ್ ಕ್ರೀಡಾ ಕೂಟಕ್ಕೆ ವೈಭವಯುತ ತೆರೆ, ೪ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ ಭಾರತ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾಎರಡು ವಾರಗಳ ಕಾಲ ನಡೆದು ರೋಚಕ ಕ್ರೀಡಾ ಕದನಕ್ಕೆ ಸಾಕ್ಷಿಯಾದ ಐಚಿ-ನಾಗೋಯಾ ಏಷ್ಯನ್ ಕ್ರೀಡಾಕೂಟಕ್ಕೆ ವೈಭವಯುತ ತೆರೆ ಬಿದ್ದಿದೆ. ಏಷ್ಯನ್ ಕ್ರೀಡೆಗಳ ಈ ೨೦ನೇ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ೨೧ ಚಿನ್ನ, ೨೭ ಬೆಳ್ಳಿ ಹಾಗೂ ೩೭ ಕಂಚಿನ ಪದಕಗಳೂ ಸೇರಿದಂತೆ ಒಟ್ಟು ೮೫ ಪದಕಗಳಿಸಿ ಗೌರವಯುತ ನಾಲ್ಕನೇ ಸ್ಥಾನದೊಂದಿಗೆ ತನ್ನ ಅಭಿಯಾನ ಮುಗಿಸಿದೆ. ನಾಗೋಯಾದ ಪಲೋಮಾ ಮಿಜುಹೊ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಮಧ್ಯಾಹ್ನ ೨.೩೦ಕ್ಕೆ ಆರಂಭವಾದ ಸಮಾರೋಪ ಕಾರ್ಯಕ್ರಮದಲ್ಲಿ ಭಾರತದ…


ಹಂಚಿಕೊಳ್ಳಿ
Read More

ಮುಕೇಶ್ ಕುಮಾರ ಮಾರಕ ದಾಳಿ, ಶೇಷ ಭಾರತಕ್ಕೆ ೩೧ನೇ ಇರಾಣಿ ಕಪ್ ಕಿರೀಟ, ಕನ್ನಡಿಗ ಸ್ಮರಣ್ ರವಿಚಂದ್ರನ್ ಪಂದ್ಯದ ಆಟಗಾರ

ಹಂಚಿಕೊಳ್ಳಿ

ಹಂಚಿಕೊಳ್ಳಿಶ್ರೀನಗರವೇಗಿ ಮುಕೇಶ್ ಕುಮಾರ್ ವೇಗದೆದುರು ರಣಜಿ ಚಾಂಪಿಯನ್ಸ್ ಜಮ್ಮು-ಕಾಶ್ಮೀರ ಬ್ಯಾಟರ್‌ಗಳು ತರಗೆಲೆಗಳಂತೆ ಉದುರುವುದರೊಂದಿಗೆ, ಶೇಷ ಭಾರತ ತಂಡ ಇರಾಣಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ೧೬೭ ರನ್‌ಗಳ ಭರ್ಜರಿ ಜಯ ದಾಖಲಿಸಿ ದಾಖಲೆಯ ೩೧ನೇ ಸಲ ಪ್ರಶಸ್ತಿಯ ಮೇಲೆ ಹಕ್ಕು ಜಮಾಯಿಸಿತು. ಶೇರ್-ಎ-ಕಾಶ್ಮೀರ ಕ್ರೀಡಾಂಗಣದಲ್ಲಿ ಪಂದ್ಯದ ನಾಲ್ಕನೇ ದಿನ ಮುಕೇಶ್ ಕೇವಲ ೩೩ ರನ್ ನೀಡಿ ೬ ವಿಕೆಟ್ ಕಬಳಿಸುವುದರೊಂದಿಗೆ, ನಿಚ್ಚಳ ಗೆಲುವು ಸಾಧಿಸಲು ತನ್ನ ಎರಡನೇ ಸರದಿಯಲ್ಲಿ ೨೭೯ ರನ್ ಗಳಿಸಬೇಕಿದ್ದ ಆತಿಥೇಯ ತಂಡ ಭೋಜನ ವಿರಾಮದ…


ಹಂಚಿಕೊಳ್ಳಿ
Read More

ವಿ.ಎಂ.ಸಿ.ಎ.ಗೆ ಭೆಟ್ಟಿ ನೀಡಿದ ಮಾಜಿ ರಾಜ್ಯ ರಣಜಿ ಆಟಗಾರ ಆನಂದ ಕಟ್ಟಿ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಪಕ್ಕಾ ಗುರಿ ಹಾಗೂ ಸತತ ಪರಿಶ್ರಮವಿದ್ದರೆ ಏನೆಲ್ಲ ಸಾಧ್ಯವೆಂದು ಮಾಜಿ ರಾಜ್ಯ ರಣಜಿ ಆಟಗಾರ ಹಾಗೂ ಮಾಜಿ ರಾಜ್ಯ ರಣಜಿ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಆನಂದ ಕಟ್ಟಿ ನುಡಿದರು. ತಮ್ಮ ಕ್ರಿಕೆಟ್ ಜೀವನವನ್ನಾರಂಭಿಸಿದ ನಗರದ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿ(ವಿ.ಎಂ.ಸಿ.ಎ.)ಗೆ ಭಾನುವಾರ ಮುಂಜಾನೆ ಭೆಟ್ಟಿಯಿತ್ತು ಕ್ರಿಕೆಟ್ ಕಲಿಯುತ್ತಿದ್ದ ಎಳೆಯರೊಡನೆ ಸಂವಾದ ನಡೆಸಿದ ಅವರು ಮಾಳಮಡ್ಡಿಯ ಕೆ.ಇ. ಬೋರ್ಡ್ಸ್ ಶಾಲಾ ಮೈದಾನದಲ್ಲಿ ಪ್ರಾರಂಭದ ದಿನಗಳಲ್ಲಿ ತಾವು ಟೆನಿಸ್ ಬಾಲ್ ಕ್ರಿಕೆಟ್ಟನ್ನೇ ಹೆಚ್ಚಾಗಿ ಆಡುತ್ತಿದ್ದುದನ್ನು ನೆನಪಿಸಿಕೊಂಡರು. ನಂತರ ಲೆದರ್‌ಬಾಲ್…


ಹಂಚಿಕೊಳ್ಳಿ
Read More

ಧಾರವಾಡ ವಲಯ ೧೫ ವರ್ಷದವರೊಳಗಿನ ಬಾಲಕಿಯರ ಕ್ರಿಕೆಟ್ ತಂಡದ ಆಯ್ಕೆ ಅಕ್ಟೋಬರ್ ೫ರಂದು

ಹಂಚಿಕೊಳ್ಳಿ

ಹಂಚಿಕೊಳ್ಳಿಹುಬ್ಬಳ್ಳಿಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಧಾರವಾಡ ವಲಯ ೧೫ ವರ್ಷದವರೊಳಗಿನ ಬಾಲಕಿಯರ ಕ್ರಿಕೆಟ್ ತಂಡದ ಆಯ್ಕೆ ಪರೀಕ್ಷೆ ಸೋಮವಾರ, ಅಕ್ಟೋಬರ್ ೫ ರಂದು ಇಲ್ಲಿಯ ರಾಜನಗರ ಕೆಎಸ್‌ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ೨೦೧೧ ಸಪ್ಟೆಂಬರ್ ೧ ಹಾಗೂ ೩೧ ಆಗಸ್ಟ್ ೨೦೧೪ರ ನಡುವೆ ಜನಿಸಿದ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ನಿವಾಸಿಗಳಾದ ಆಟಗಾರ್ತಿಯರು ಮಾತ್ರ ಈ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅರ್ಹರು ಎಂದು ತಿಳಿಸಿರುವ ಕೆ.ಎಸ್.ಸಿ.ಎ. ಧಾರವಾಡ ವಲಯ ನಿಮಂತ್ರಕ ವೀರಣ್ಣ…


ಹಂಚಿಕೊಳ್ಳಿ
Read More

ಏಷ್ಯನ್ ಗೇಮ್ಸ್: ಮಲೇಷ್ಯಾ ಎದುರು ೫-೧ ಜಯಭೇರಿ, ಹಾಕಿ ಚಿನ್ನ ಉಳಿಸಿಕೊಂಡ ಹರ್ಮನ್‌ಪ್ರೀತ್ ಪಡೆ, ೨೦೨೮ರ ಒಲಿಂಪಿಕ್ಸ್‌ಗೆ ನೇರ ಪ್ರವೇಶ

ಹಂಚಿಕೊಳ್ಳಿ

ಹಂಚಿಕೊಳ್ಳಿಕಾಕಮಿಗಹರಾ(ಜಪಾನ)ಮಲೇಷ್ಯಾ ಎದುರು ೫-೧ ಗೋಲುಗಳ ಅಧಿಕಾರಯುತ ಜಯ ದಾಖಲಿಸಿದ ಹರ್ಮನ್‌ಪ್ರೀತ್ ಸಿಂಗ್ ಸಾರಥ್ಯದ ಭಾರತದ ಪುರುಷರ ಹಾಕಿ ತಂಡ ನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಬಾಚಿಕೊಂಡಿದೆಯಲ್ಲದೇ, ೨೦೨೮ರಲ್ಲಿ ಲಾಸ್ ಏಂಜೆಲ್ಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡೆಗಳಿಗೆ ನೇರ ಪ್ರವೇಶ ದೊರಕಿಸಿಕೊಂಡಿದೆ. ಶನಿವಾರ ಇಲ್ಲಿಯ ಗಿಫು ಪ್ರಿಫೆಕ್ಟರಲ್ ಗ್ರೀನ್ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಬಾರಿಸಿದರೆ, ಜುಗರಾಜ ಸಿಂಗ್, ಹಾರ್ದಿಕ್ ಸಿಂಗ್ ಹಾಗೂ ಶಿಲಾನಂದ ಲಾಕ್ರಾ ತಲಾ ಒಂದೊಂದು ಯಶ…


ಹಂಚಿಕೊಳ್ಳಿ
Read More

೪೪ ವರ್ಷಗಳ ನಂತರ ಭಾರತದ ವನಿತೆಯರಿಗೆ ಏಷ್ಯನ್ ಹಾಕಿ ಚಿನ್ನ, ೨೦೨೮ರ ಒಲಿಂಪಿಕ್ಸ್‌ಗೆ ನೇರ ಪ್ರವೇಶ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾ(ಜಪಾನ)ಏಷ್ಯನ್ ಕ್ರೀಡೆಗಳಲ್ಲಿ ಮಹಿಳಾ ಹಾಕಿ ಚಿನ್ನಕ್ಕಾಗಿ ೪೪ ವರ್ಷಗಳ ಕಾಯುವಿಕೆ ಕೊನೆಗೂ ಮುಗಿದಿದೆ. ಶುಕ್ರವಾರ ನಡೆದ ಫೈನಲ್ಸ್ ನಲ್ಲಿ ಹಾಲಿ ಚಾಂಪಿಯನ್ ಚೀನದ ಎದುರು ೧-೦ ಗೋಲಿನ ರೋಚಕ ಗೆಲುವನ್ನು ದಾಖಲಿಸಿದ ಸಲಿಮಾ ಟೆಟೆ ಸಾರಥ್ಯದ ಭಾರತ ತಂಡ ಚಿನ್ನದ ಪದಕವನ್ನು ಬಾಚಿಕೊಂಡಿಲ್ಲದೇ ೨೦೨೮ರಲ್ಲಿ ಲಾಸ್ ಏಂಜೆಲ್ಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ‌ಗೂ ನೇರ ಪ್ರವೇಶ ದೊರಕಿಸಿಕೊಂಡಿತು. ಪಂದ್ಯದ ೧೦ನೇ ನಿಮಿಷದಲ್ಲಿ ಲಾಲ್ರೆಮ್‌ಸಿಯಾಮಿ ಹ್ಮಾರ್ಜೊತೆ ಬಾರಿಸಿದ ಗೋಲು ಪಂದ್ಯದ ಹಣೆಬರಹ ಬರೆಯಿತು. ಸಲಿಮಾ ಟೆಟೆ ನೀಡಿದ ನಿಖರ…


ಹಂಚಿಕೊಳ್ಳಿ
Read More

ಏಷ್ಯನ್ ಗೇಮ್ಸ್: ಶುಕ್ರವಾರ ಭಾರತಕ್ಕೆ ಮತ್ತೆ ೪ ಚಿನ್ನ, ಒಟ್ಟು ಸ್ವರ್ಣಗಳ ಸಂಖ್ಯೆ ೧೫ಕ್ಕೆ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಶುಕ್ರವಾರ ಭಾರತದ ಪಾಲಿಗೆ ನಿಜವಾಗಿಯೂ ಶುಭ ಶುಕ್ರವಾರ’ವಾಗಿತ್ತು. ಬಾಕ್ಸಿಂಗ್‌ನಲ್ಲಿ ಮೂರು ಹಾಗೂ ಕುಸ್ತಿಯಲ್ಲಿ ಒಂದು ಹೀಗೆ ಒಂದೇ ದಿನ(ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ ೩.೩೦ರ ವರೆಗೆ) ನಾಲ್ಕು ಚಿನ್ನದ ಪದಕಗಳನ್ನು ಬಾಚಿಕೊಂಡ ಭಾರತ ಒಟ್ಟು ೭೫ ಪದಕಗಳನ್ನು(೧೫ ಚಿನ್ನ, ೨೫ ಬೆಳ್ಳಿ ಹಾಗೂ ೩೫ ಕಂಚು) ಸಂಪಾದಿಸಿ ಪದಕಗಳ ಪಟ್ಟಿಯಲ್ಲಿ ೫ನೇ ಸ್ಥಾನಕ್ಕೇರಿತ್ತು. ದಿನದ ಪ್ರಾರಂಭದಲ್ಲಿ ತಮ್ಮ ೨೯ನೇ ಹುಟ್ಟು ಹಬ್ಬವನ್ನಾಚರಿಸಿಕೊಳ್ಳುತ್ತಿದ್ದ ಭಾರತದ ಅಗ್ರ ಬಾಕ್ಸರ್ ಲವ್ಲೀನಾ ಬೊರ್ಗೊಹೇನ್ ಮಹಿಳೆಯರ ೭೫ ಕೆ.ಜಿ….


ಹಂಚಿಕೊಳ್ಳಿ
Read More