ರಾಜ್ಯ ರಣಜಿ ತಂಡದಲ್ಲಿ ‘ಕಾರವಾರ ಹುಡುಗ’ ರಿತೇಶ ಭಟ್ಕಳ
ಹಂಚಿಕೊಳ್ಳಿಧಾರವಾಡಹೊಸ ಋತುವಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಕಾರವಾರ ಹುಡುಗ’ ಆಫ್-ಸ್ಪಿನ್ನಿಂಗ್ ಆಲ್‌ರೌಂಡರ್ ರಿತೇಶ್ ಭಟ್ಕಳ್ ಕೊನೆಗೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಉತ್ಕಷ್ಟ ಪ್ರದರ್ಶನ ನೀಡುತ್ತಾ ಬಂದಿದ್ದರೂ ಆಯ್ಕೆದಾರರ ಅವಕೃಪೆಗೆ ಒಳಗಾಗಿದ್ದ ರಿತೇಶ ಭಟ್ಕಳ್ ಅವರಿಗೆ ಕೊನೆಗೂ ಹಸಿರು ನಿಶಾನೆ ದೊರಕಿದೆ. ಕಾರವಾರದಲ್ಲಿ ಹುಟ್ಟಿ ಬೆಳೆದ ರಿತೇಶ, ತಮ್ಮ ಕ್ರಿಕೆಟ್ ಜೀವನ ಆರಂಭಿಸಿದ್ದು ಧಾರವಾಡದ ವಸಂತ ಮುರ್ಡೆಶ್ವರ ಕ್ರಿಕೆಟ್ ಅಕಾಡೆಮಿ(ವಿ.ಎಂ.ಸಿ.ಎ.)ಯಿಂದ ಎನ್ನುವುದು ಗಮನಾರ್ಹ. ೧೪, ೧೬ ಹಾಗೂ ೧೯ ವಯೋಮಿತಿ…
