ಧಾರವಾಡ
ನಗರದ ಪದವಿ ಪೂರ್ವ ಮಹಾವಿದ್ಯಾಲಯಗಳ ತಾಲೂಕು ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಜೆ.ಎಸ್.ಎಸ್. ಆರ್.ಎಸ್.ಎಚ್. ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪೃಥ್ವಿ ಪೂಜಾರಿ, ದ್ವಿತೀಯ ಸ್ಥಾನ ಗೌರಿ ಪೂಜಾರಿ, ತೃತೀಯ ಸ್ಥಾನ ಐಶ್ವರ್ಯ ಅಮ್ಮಿನಭಾವಿ, ೫ನೇ ಸ್ಥಾನ ಪ್ರತಿಭಾ ಜೋಗಿನ ಹಾಗೂ ಆರನೇ ಸ್ಥಾನ ಶ್ವೇತಾ ಬಡಿಗೇರ ಮತ್ತು ಬಾಲಕರ ವಿಭಾಗದಲ್ಲಿ ನಾಲ್ಕನೇಯ ಸ್ಥಾನ ಆದರ್ಶ ಪಡೆದುಕೊಂಡಿರುತ್ತಾರೆ.
ಈ ಅಮೋಘ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಆಡಳಿತ ಅಧಿಕಾರಿ ಅರಿಹಂತ ಪ್ರಸಾದ, ಡಾ. ಸೂರಜ್ ಜೈನ್, ಮಹಾವೀರ ಉಪಾದ್ಯೆ, ಪ್ರಾಚಾರ್ಯ ಭಾರತಿ ಶಾನಭಾಗ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಿನ್ನಪ್ಪ ಕುಂದಗೋಳ, ಶ್ರವಣಕುಮಾರ ಯೋಗಿ, ಅರುಣ ಸವಣೂರ ಹಾಗೂ ಕಾಲೇಜಿನ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
