ಕೆ.ಎಸ್.ಸಿ.ಎ. ಧಾರವಾಡ ವಲಯ ೧೬ ವರ್ಷದವರೊಳಗಿನ ಕ್ರಿಕೆಟ್
ಹುಬ್ಬಳ್ಳಿ
ನಗರದ ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್(ಎ) ತಂಡ ೨೦೨೬-೨೭ನೇ ಸಾಲಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಧಾರವಾಡ ವಲಯ ೧೬ ವರ್ಷದವರೊಳಗಿನ ಅಂತರ-ಕ್ಲಬ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬಲಗೈ ಮಧ್ಯಮ ವೇಗಿಗಳಾದ ಭುವನ ಅಂಗಡಿ ಹಾಗೂ ಆರ್ನವ ಬೊಂಗಾಳೆ ಅವರುಗಳ ಮಾರಕ ದಾಳಿಯ ನೆರವಿನಿಂದ ಅದು ಶನಿವಾರ ಬೆಳಗಾವಿಯ ಕೆ.ಎಸ್.ಸಿ.ಎ. ಸ್ಟೇಡಿಯಂನಲ್ಲಿ ನಡೆದ ಫೈನಲ್ಸ್ನಲ್ಲಿ ಅಲ್ಲಿಯದೇ ಆದ ಯೂನಿಯನ್ ಜಿಮಖಾನಾ(ಎ) ತಂಡವನ್ನು ೩೬ ರನ್ಗಳಿಂದ ಪರಾಭವಗೊಳಿಸಿತು.
ಗೆಲ್ಲಲು ೫೦ ಓವರ್ಗಳಲ್ಲಿ ೧೪೨ ರನ್ ಗಳಿಸಬೇಕಿದ್ದ ಯೂನಿಯನ್ ಜಿಮಖಾನಾ(ಎ) ತಂಡ ಪ್ರಾರಂಭಿಕ ಬ್ಯಾಟರ್ ಆದಿತ್ಯ ಹುಂಬರವಾಡಿ(೨೯, ೧೯ ಎಸೆತ, ೩ ಬೌಂಡರಿ, ೨ ಸಿಕ್ಸರ್) ಬಿರುಸಿನ ಆಟದ ನೆರವಿನಿಂದ ಒಂದು ಹಂತದಲ್ಲಿ ೩ ವಿಕೆಟ್ಗಳಿಗೆ ೬೦ರ ಮೊತ್ತ ದಾಖಲಿಸಿ ಗೆಲುವಿನ ಹಾದಿಯಲ್ಲಿತ್ತಾದರೂ ಭುವನ ಅಂಗಡಿ(೪/೨೧) ಹಾಗೂ ಆರ್ನವ ಬೊಂಗಾಳೆ(೩/೭) ಮಾರಕ ದಾಳಿಯ ಎದುರು ಕುಸಿದು ೩೭ ಓವರ್ಗಳಲ್ಲಿ ೧೦೫ಕ್ಕೆ ಸರ್ವಪತನ ಕಂಡಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಚಾಂಪಿಯನ್ಸ್ ನೆಟ್(ಎ) ತಂಡ ಬಲಗೈ ಮಧ್ಯಮ ವೇಗಿಗಳಾದ ಅನೀಶ್ ತೆಂಡೂಲ್ಕರ್(೪/೧೫) ಮತ್ತು ಶಾರುಖ್ ಧಾರವಾಡಕರ(೨/೨೧), ಎಡಗೈ ಸ್ಪಿನ್ನರ್ ಅತಿಥಿ ಬೋಗಾನ್(೨/೨೪) ಹಾಗೂ ಬಲಗೈ ವೇಗಿ ಇಶಾನ್ ತಿಳವೆ(೨/೩೧) ಮಾರಕ ದಾಳಿಯೆದುರು ಕುಸಿದು ಒಂದು ಹಂತದಲ್ಲಿ ೭೬ರ ಸ್ಕೋರಿನಲ್ಲಿ ೭ ವಿಕೆಟ್ ಕಳೆದುಕೊಂಡು ತೀರ ಸಂಕಷ್ಟದಲ್ಲಿತ್ತಾದರೂ ೯ನೇ ಕ್ರಮಾಂಕದ ಬ್ಯಾಟರ್ ಅಹಮದ್ ರಜಾ ಮುಜಾವರ(೩೫, ೩೯ ಎಸೆತ, ೨ ಬೌಂಡರಿ, ೧ ಸಿಕ್ಸರ್) ಹಾಗೂ ೭ನೇ ಕ್ರಮಾಂಕದ ಆಟಗಾರ ಆರ್ನವ್ ಬೊಂಗಾಳೆ(೨೪, ೬೦ ಎಸೆತ) ಅವರ ಅತ್ಯುಪಯಕ್ತ ಬ್ಯಾಟಿಂಗ್ ನೆರವಿನಿಂದ ೪೧.೧ ಓವರ್ಗಳಲ್ಲಿ ೧೪೧ರ ಮೊತ್ತ ತಲುಪಿತು. ಪ್ರಾರಂಭಿಕ ಬ್ಯಾಟರ್ ವಿನೀತ್ ಖೋತ(೨೩, ೨೯ ಎಸೆತ, ೫ ಬೌಂಡರಿ) ಇನ್ನೊಬ್ಬ ಪ್ರಮುಖ ಸ್ಕೋರರ್.
ಸಂಕ್ಷಿಪ್ತ ಸ್ಕೋರುಗಳು: ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್(ಎ), ಹುಬ್ಬಳ್ಳಿ: ೪೧.೧ ಓವರ್ಗಳಲ್ಲಿ ೧೪೧(ಅಹಮದ್ ರಜಾ ಮುಜಾವರ ೩೫, ಆರ್ನವ್ ಬೊಂಗಾಳೆ ೨೪, ವಿನೀತ್ ಖೋತ ೨೩, ಅಕ್ಷಯ ಬಳಿಗಾರ ೧೦, ಅನೀಶ್ ತೆಂಡೂಲ್ಕರ್ ೪/೧೫, ಶಾರುಖ್ ಧಾರವಾಡಕರ ೨/೨೧, ಅತಿಥಿ ಬೋಗಾನ್ ೨/೨೪, ಇಶಾನ್ ತಿಳವೆ ೨/೩೧), ಯೂನಿಯನ್ ಜಿಮಖಾನಾ(ಎ), ಬೆಳಗಾವಿ: ೩೭ ಓವರ್ಗಳಲ್ಲಿ ೧೦೫(ಆದಿತ್ಯ ಹುಂಬರವಾಡಿ ೨೯, ಅತಿಥಿ ಬೋಗಾನ್ ೧೫, ಪಾರ್ಥ ಜಾಧವ ೧೩, ಭುವನ ಅಂಗಡಿ ೪/೨೧, ಆರ್ನವ ಬೊಂಗಾಳೆ ೩/೭, ಅಹಮದ್ ರಜಾ ಮುಜಾವರ ೧/೧೬). ಫಲಿತಾಂಶ: ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್ಗೆ ೩೬ ರನ್ಗಳ ಗೆಲುವು.

