ಮಕ್ಕಳಿಗೆ ಕನ್ನಡ ಕಲಿಸುವುದು ಅನಿವಾರ್ಯ: ಶ್ರೀ ಜಗದೀಶ ಶೆಟ್ಟರ್‌

ಹಂಚಿಕೊಳ್ಳಿ

ಹುಬ್ಬಳ್ಳಿ
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಇಂದು ಉಳಿಸಿ, ಬೆಳೆಸುವ ಅನಿವಾರ್ಯತೆ ಇದೆ. ನಾವು ನಮ್ಮ ಮಕ್ಕಳಿಗೆ ಕನ್ನಡ ಕಲಿಸುವುದನ್ನು ಬಿಟ್ಟು ಇಂಗ್ಲಿಷ್ ಶಾಲೆಗಳಿಗೆ ಕಳಿಸುತ್ತಿದ್ದೇವೆ. ಹೀಗಾಗಿ ಅವರಲ್ಲಿ ಕನ್ನಡದ ಬಗ್ಗೆ ಬಗ್ಗೆ ಕೀಳರಿಮೆ ಹಾಗೂ ತಾತ್ಸಾರ ಭಾವನೆ ಬಂದಿದೆ. ಮಕ್ಕಳಿಗೆ ಮಾತೃಭಾಷೆ ಕನ್ನಡದಲ್ಲಿ ಮಾತನಾಡುವುದನ್ನು ಮತ್ತು ಕನ್ನಡದ ಪದಗಳ ಬಳಕೆ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ನಗರದ ವಿಶ್ವ ಕನ್ನಡ ಬಳಗದ ವತಿಯಿಂದ ಹುಬ್ಬಳ್ಳಿಯ ಕೇಶ್ವಾಪುರ ಭುವನೇಶ್ವರಿ ನಗರದಲ್ಲಿರುವ ಭುವನೇಶ್ವರಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂಗ್ಲಿಷ್ ಭಾಷೆಯೂ ನಮಗೆ ಬೇಕು. ಅದನ್ನು ಕಲಿಯಬೇಕು. ಆದರೆ, ನಮ್ಮ ದೈನಂದಿನ ಬದುಕಿನಲ್ಲಿ ಹಾಗೂ ವ್ಯವಹಾರದಲ್ಲಿ ಕನ್ನಡ ಬಳಸಬೇಕು. ಆಡಳಿತ ಭಾಷೆಯಾಗಿ ಸರ್ಕಾರಿ ಕಚೇರಿಗಳಲ್ಲೂ ಸಂಪೂರ್ಣ ಕನ್ನಡದಲ್ಲೇ ವ್ಯವಹರಿಸುವಂತಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯ ಉದಯವಾಗಲು ಸಹಕರಿಸಿದ ಮಹನೀಯರಾದ ಕುವೆಂಪು, ಶಿವರಾಮಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ, ಬಿ.ಎಂ. ಶ್ರೀಕಂಠಯ್ಯ, ಅದರಗುಂಚಿ ಶಂಕರಗೌಡ ಪಾಟೀಲರ ಸೇವೆಯನ್ನು ಸ್ಮರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಖಂಡ ಮಲ್ಲಿಕಾರ್ಜುನ ಸಾವುಕಾರ ಮಾತನಾಡಿ, ಎದೆ ಬಗೆದರೂ ಇರಲಿ ಕನ್ನಡ, ಹೃದಯ ಬಡಿದರೂ ಇರಲಿ ಕನ್ನಡ, ಗರ್ವದಿಂದ ಹೇಳು ನನ್ನ ಭಾಷೆ ಕನ್ನಡ, ಹೆಮ್ಮೆಯಿಂದ ಹೇಳು ನಾನು ಕನ್ನಡಿಗ ಎಂಬ ನುಡಿಗಳ ಮೂಲಕ ಕನ್ನಡ ಭಾಷೆಯ ಮಹತ್ವವನ್ನು ಸಾರಿದರು.

ಪಿರಮಿಡ್ ಧ್ಯಾನ್ ಮಂದಿರದ ಹಿರಿಯ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ ಧ್ಯಾನದ ಕುರಿತು ಮಾತನಾಡಿ, ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಭುವನೇಶ್ವರಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ K.P. ಘಂಟಿ ಅಧ್ಯಕ್ಷತೆ ವಹಿಸಿದ್ದರು.

ವಿಶ್ವ ಕನ್ನಡ ಬಳಗ ಅಧ್ಯಕ್ಷ ಶ್ರೀ ಸದಾಶಿವ ಚೌಶೆಟ್ಟಿ, ರತ್ನಾ ಚೌಶೆಟ್ಟಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ರಮೇಶ ಮಹಾದೇವಪ್ಪನವರ, ರವೀಂದ್ರ ದ್ಯಾಬೇರಿ, ಶಾಮಲಿಂಗ ಅವಳಗಿ, ಸಿದ್ಧರಾಮ ನಡಕಟ್ಟಿ, ಬಸವರಾಜ ಸುಳ್ಳದ, ಮಲ್ಲಮ್ಮ ಕಾಳಗಿ, ಸಾಹಿತಿಗಳು, ಮುಂತಾದವರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಿಶ್ವನಾಥ ಮಹಿಳಾ ಮಂಡಳದ ಸದಸ್ಯರು ಪ್ರಾರ್ಥಿಸಿದರು. ಶಂಕರ ಪಾಟೀಲ ವಂದಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *