ಕನ್ನಡ ರಾಜ್ಯೋತ್ಸವ; ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ!

ಹಂಚಿಕೊಳ್ಳಿ

ಧಾರವಾಡ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶ್ರೀನಗರ ವೃತ್ತದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕದ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ನಮನಗಳನ್ನು ಅರ್ಪಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಸಮಾಜಕ್ಕೆ ಗೌರವ ತಂದ ಸಾಧಕರಾದ ಬಿ.ಡಿ. ಹಿರೇಮಠ, ಶಿವನಗೌಡ ಪಾಟೀಲ, ವಸಂತ ಘಾಟಗೆ, ಹನುಮಂತಪ್ಪ ಕೊಳ್ಳಿ, ಶಿವಪ್ಪ ಹೊಸಮನಿ, ಕೆ.ಜಿ. ಮಾನೆ, ಬಸಯ್ಯ ಸೂರ್ಯವಂಶಿ, ರಮೇಶ ನೆಲವಡಿ, ವಿವೇಕ ಕಡೆಮನಿ, ಸಿಕಂದರ್ ನದಾಫ್, ರಾಜೇಶ್ವರಿ ಹೊಸೂರು, ಯಲ್ಲವ್ವ ಅವ್ವನವರ ಹಾಗೂ ರಾಕೇಶ ಹೊಸಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾಧವ, ರವೀಂದ್ರ ಮಾನೆ, ಅನ್ವರ್ ನದಾಫ್, ಮೋಹನ ಘಾಟಗೆ, ವಿನೋದಗೌಡ ಪಾಟೀಲ, ಲೋಹಿತ್ ಬಾರ್ಕರ್, ವಿನಯ ಬೆಳ್ಳಕ್ಕಿ, ಈರಣ್ಣ ಪಾಟೀಲ, ಮುತ್ತು ಹಾದಿಮನಿ, ಅರ್ಜುನ ಪವಾರ, ಅರವಿಂದ ಮೂಲಿಮನಿ, ರಾಜು ಸವದತ್ತಿ, ಸುಭಾಷ ಬ್ರಹ್ಮಗೌಡರ, ಹನುಮಂತ ಪೂಜಾರ, ಪ್ರಮೋದ ಶೆಟ್ಟಿ, ಹರ್ಷದ ಪಠಾಣ, ಗುರು ಸುಣಗದ, ಮಲ್ಲೇಶ ಹೊಂಗಲ, ಸರೋಜಾ ಪಾಟೀಲ, ಮಧು ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *