ಹೊಸಯಲ್ಲಾಪುರ, ಹಾವೇರಿಪೇಟೆಯ ಹಿರಿಯರಿಂದ ಶುಭಾಶಯ | ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಧಾರವಾಡ
ಮಾಜಿ ಸಚಿವರು, ಶಾಸಕರಾದ ವಿನಯ ಕುಲಕರ್ಣಿ ಅವರ ಜನ್ಮದಿನದ ಅಂಗವಾಗಿ ಧಾರವಾಡದಲ್ಲಿ ಶನಿವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಹೊಸಯಲ್ಲಾಪುರ ಹಾಗೂ ಹಾವೇರಿಪೇಟೆಯ ಗುರು-ಹಿರಿಯರು ವಿನಯ ಕುಲಕರ್ಣಿ ಮತ್ತು ಅವರ ಪತ್ನಿ ಶಿವಲೀಲಾ ಕುಲಕರ್ಣಿ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಿ ಜನ್ಮದಿನದ ಶುಭಾಶಯಗಳನ್ನು ಕೋರಿದರು.
ಜನ್ಮದಿನದ ಹಿನ್ನೆಲೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಅರವಿಂದ ಏಗನಗೌಡರ, ಪಾಲಿಕೆ ಸದಸ್ಯ ಪ್ರಕಾಶ ಘಾಟಿಗೆ, ಬಸವಂತಪ್ಪ ಮಾಲನವರ, ಸಂಜೀವ ಲಕಮನಹಳ್ಳಿ, ಕೆ.ಎಸ್. ಭೀಮಣ್ಣವರ, ಗಂಗಪ್ಪ ಜಮಾದಾಳೆ, ಜಯಪ್ಪ ಸಿದ್ನಾಳ, ಈಶ್ವರ ಮಾಲಗಾರ, ಈರಪ್ಪ ಗೋಡಿಕಟ್ಟಿ ಹಾಗೂ ರಾಜು ಘಾಟಿಗೆ ಸೇರಿದಂತೆ ಹೊಸಯಲ್ಲಾಪುರ ಮತ್ತು ಹಾವೇರಿಪೇಟೆಯ ಹಿರಿಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಜನ್ಮದಿನದ ನಿಮಿತ್ತ ಜಿಲ್ಲಾ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ;
ಮಾಜಿ ಸಚಿವರು, ಶಾಸಕರಾದ ವಿನಯ ಕುಲಕರ್ಣಿ ಅವರ ಜನ್ಮದಿನದ ಅಂಗವಾಗಿ ಧಾರವಾಡ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಮಾನವೀಯ ಸೇವಾ ಕಾರ್ಯ ಹಮ್ಮಿಕೊಳ್ಳಲಾಯಿತು.
ಆಸ್ಪತ್ರೆಯಲ್ಲಿನ ರೋಗಿಗಳ ಆರೋಗ್ಯ ಕ್ಷೇಮ ವಿಚಾರಿಸಿ ಹಣ್ಣು ಹಂಪಲು ವಿತರಿಸುವ ಮೂಲಕ ಜನ್ಮದಿನವನ್ನು ಸೇವಾ ಕಾರ್ಯದೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಜು ಚುರಮರಿ, ಪರಶುರಾಮ ಚುರಮರಿ, ಆನಂದ ಸಿಂಗನಾಥ, ವಸಂತ ಅರ್ಕಾಚಾರ್, ನಿಜಾಮ ರಾಹಿ, ಟೆರೆನ್ಸ್ ಪಾಲ್, ವೆಂಕಟೇಶ ರಾಯ್ಕರ್, ಸತೀಶ ದುಮ್ಮಾಳೆ, ದರ್ಶನ ವಜ್ಜನ್ನವರ, ಅಬಿ ಪಾಟೀಲ, ಭರತ ವಜ್ಜನ್ನವರ ಹಾಗೂ ಆಲ್ಫ್ರೆಡ್ ಮಸ್ಕರೇನಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

