ನವಂಬರ್ ೨೩ರಂದು ಮಳಲಿ ಮಠದಲ್ಲಿ ಕಾರ್ತಿಕ ದೀಪೋತ್ಸವ

ಹಂಚಿಕೊಳ್ಳಿ

ರಿಪ್ಪನ್‌ಪೇಟೆ
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ತೀರ್ಥಹಳ್ಳಿ ತಾಲೂಕ ಶ್ರೀಮನ್ ಮಹಾಸಂಸ್ಥಾನ ಮಳಲಿ ಮಠದಲ್ಲಿ ನವಂಬರ್ ೨೩ ಸೋಮವಾರ ಸಂಜೆ ೫ ಗಂಟೆಗೆ ಕಾರ್ತಿಕ ದೀಪೋತ್ಸವ ಧರ್ಮ ಸಮಾರಂಭ ನಡೆಯುವುದು.

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವ ಸಮಾರಂಭದಲ್ಲಿ ಶಾಸಕರಾದ ಅರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ಬೇಳೂರು ಗೋಪಾಲಕೃಷ್ಣ, ವಿ.ಪ. ಸದಸ್ಯ ಡಾ. ಧನಂಜಯ ಸರ್ಜಿ, ಡಿಸಿಸಿ ಬ್ಯಾಂಕ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ, ಹರತಾಳು ಹಾಲಪ್ಪ, ಸಾಗರದ ಬಿ.ಎ. ಇಂದೂಧರಗೌಡ್ರು, ಶಿವಮೊಗ್ಗದ ಎಸ್.ಎಸ್. ಜ್ಯೋತಿಪ್ರಕಾಶ, ಕೋಣಂದೂರಿನ ಕೆ.ಅರ್. ಪ್ರಕಾಶ್, ಚನ್ನಬಸಪ್ಪಗೌಡರು, ಬಿ. ಯುವರಾಜ್, ಉಮೇಶ ಮಸರೂರು, ಹೆಚ್.ವಿ. ಈಶ್ವರಪ್ಪಗೌಡ್ರು, ಎನ್.ಎನ್. ವರ್ತೇಶ ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದು, ಬಂಕಾಪುರದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸುವರು. ಕವಲೇದುರ್ಗದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡುವರು. ಮಳಲಿ ಸಂಸ್ಥಾನ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ, ಹೊಸನಗರದ ಡಿ.ಆರ್. ವಿನಯಕುಮಾರ್ ದುಮ್ಮ, ಹಾಲಗುಡ್ಡೆಯ ಎಚ್.ಎನ್. ಯ್ಯೋಮಕೇಶಗೌಡ್ರು, ಹೊಸನಗರದ ಈಶ್ವರಪ್ಪಗೌಡರು, ಕಮದೂರಿನ ಪರಮೇಶಗೌಡರು ಕೆ.ವಿ., ಹುಗಡಿಯ ಡಾ.ಶಶಿಕಾಂತ ಎಚ್.ಸಿ. ಹಾಗೂ ಕಗ್ಗಲಿಯ ಡಾ. ಸುಧೀನ ಪಾಟೀಲ ಇವರಿಗೆ ಗುರುರಕ್ಷೆ ನೀಡಲಾಗುವುದು.

ಬೆಂಗಳೂರಿನ ಹಿರಿಯ ಪತ್ರಕರ್ತ ಆರ್.ಎಸ್. ಪ್ರಶಾಂತ ಪ್ರಾಸ್ತಾವಿಕ ಮಾತನಾಡುವರು. ಸಮಾರಂಭದಲ್ಲಿ ತೊಗರ್ಸಿ ಪಂಚವಣ್ಣಿಗೆಮಠ, ಶಾಂತಪುರ, ಬಿಳಕಿ, ಕೋಣಂದೂರು, ಸಂಗೊಳ್ಳಿ, ತಾವರೆಕೆರೆ, ದುಗ್ಲಿ-ಕಡೇನಂದಿಹಳ್ಳಿ, ಹಣಮಾಪುರ, ಹಾರನಹಳ್ಳಿ, ಸಿಂದಗಿ ಮಠಗಳ ಶಿವಾಚಾರ್ಯರು ಪಾಲ್ಗೊಳ್ಳುವರು.

ಅಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಶ್ರೀ ಆದಿಗುರು ನಾಗಾರ್ಜುನ ಶಿವಾಚಾರ್ಯರಾದಿಯಾಗಿ ಎಲ್ಲಾ ಲಿಂಗೈಕ್ಯ ಶಿವಾಚಾರ್ಯರ ಕರ್ತೃ ಗದ್ದುಗೆಗಳಿಗೆ, ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಮಹಾ ರುದ್ರಾಭಿಷೇಕ ಹಾಗೂ ಶ್ರೀ ಚೌಡೇಶ್ವರಿದೇವಿಗೆ ಸಹಸ್ರ ಕುಂಕುಮಾರ್ಚನೆ ಮತ್ತು ಹೋಮ ಹವನಾದಿಗಳು, ಶ್ರೀ ಗುರುಗಳ ಪಾದಪೂಜೆ ನಡೆಯುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀಮಠದ ಪ್ರಕಟಣೆ ತಿಳಿಸಿದೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *