ನವದೆಹಲಿ
ಢಾಕಾದಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆತಿಥೇಯ ಬಾಂಗ್ಲಾದೇಶದ ಎದುರು ಗೆಲುವು ಸಾಧಿಸುವುದರೊಂದಿಗೆ, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್(ಡಬ್ಲ್ಯೂ.ಟಿ.ಸಿ.) ಪಾಯಿಂಟ್ ಪಟ್ಟಿಯಲ್ಲಿ ೫ನೇ ಸ್ಥಾನದಲ್ಲಿದ್ದ ಟಿಂ ಇಂಡಿಯಾ ೪ನೇ ಸ್ಥಾನಕ್ಕೇರಿದೆ.
ವೆಸ್ಟ್ ಇಂಡೀಸ್ ೮ನೇ ಸ್ಥಾನದಲ್ಲಿಯೇ ಮುಂದುವರಿದರೂ ೭ನೇ ಸ್ಥಾನದಲ್ಲಿರುವ ಶ್ರೀಲಂಕಾದ ತೀರ ಸನಿಹ ಬಂದಿದೆ.
ಈ ಪಂದ್ಯಕ್ಕೂ ಮೊದಲು ಬಾಂಗ್ಲಾದೇಶ ೫೫.೫೬% ಪಿಸಿಟಿ(೬ ಪಂದ್ಯಗಳಲ್ಲಿ ೩ ಗೆಲುವು, ೨ ಸೋಲು, ೧ ಡ್ರಾ) ಹೊಂದಿದ್ದು ೪ನೇ ಸ್ಥಾನದಲ್ಲಿತ್ತು. ಭಾರತ ೫೧.೫೨% ಪಿಸಿಟಿ(೧೧ ಪಂದ್ಯಗಳಲ್ಲಿ ೫ ಗೆಲುವು, ೪ ಸೋಲು, ೨ ಡ್ರಾ) ಹೊಂದಿ ೫ನೇ ಸ್ಥಾನದಲ್ಲಿತ್ತು. ವೆಸ್ಟ್ ಇಂಡೀಸ್ ೨೦.೮೩% ಪಿಸಿಟಿ ಹೊಂದಿ ೮ನೇ ಸ್ಥಾನದಲ್ಲಿತ್ತು.

ವೆಸ್ಟ್ ಇಂಡೀಸ್ ಎದುರಿನ ಸೋಲಿನ ನಂತರ ಬಾಂಗ್ಲಾದೇಶದ ಪಿಸಿಟಿ ೪೭.೬೨% ಗೆ ಇಳಿದಿದೆ. ಇನ್ನೊಂದೆಡೆ ವಿಂಡೀಸ್ ಪಿಸಿಟಿ ೨೬.೯೨ಕ್ಕೆ ಏರಿದ್ದು, ಶ್ರೀಲಂಕಾದ ೩೩.೩೩% ಪಿಸಿಟಿ ಸಮೀಪ ಬಂದಿದೆ.
ನ್ಯೂಜಿಲೆಂಡ್ಗೆ ಅಗ್ರಸ್ಥಾನ:
ಆಡಿರುವ ೬ ಪಂದ್ಯಗಳಲ್ಲಿ ೪ ಗೆದ್ದು, ೧ ಸೋತು ಇನ್ನೊಂದನ್ನು ಡ್ರಾ ಮಾಡಿಕೊಂಡಿರುವ ನ್ಯೂಜಿಲೆಂಡ್ ೭೨.೨೨% ಪಿಸಿಟಿಯೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಶನಿವಾರವೇ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಸೋಲಿನ ಆಘಾತವುಣಬಡಿಸಿದ ದಕ್ಷಿಣ ಆಫ್ರಿಕ ೭ ಪಂದ್ಯಗಳಲ್ಲಿ ೫ ಗೆಲುವು ಹಾಗೂ ೭ ಸೋಲುಗಳೊಂದಿಗೆ ೭೧೪೩% ಪಿಸಿಟಿ ಹೊಂದಿ ಎರಡನೇ ಸ್ಥಾನಕ್ಕೇರಿದೆ. ಆಸ್ಟೆçÃಲಿಯ(೧೩ ಪಂದ್ಯ, ೯ ಗೆಲುವು, ೪ ಸೋಲು) ೬೯.೨೩% ಪಿಸಿಟಿ ಹೊಂದಿ ಮೂರನೇಯದಾಗಿದೆ.
ಇಂಗ್ಲೆಂಡ್(೧೬ ಪಂದ್ಯ, ೭ ಜಯ, ೮ ಸೋಲು) ೩೮.೫೪% ಪಿಸಿಟಿಯೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ಆಡಿದ ೯ ಪಂದ್ಯಗಳಲ್ಲಿ ೭ ಸೋಲು ಹಾಗೂ ಕೇವಲ ೨ ಗೆಲುವುಗಳೊಂದಿಗೆ ೪.೬೩% ಪಿಸಿಟಿ ಹೊಂದಿ ೯ ಹಾಗೂ ಕೊನೆಯ ಸ್ಥಾನಕ್ಕೆ ಕುಸಿದಿದೆ.

