ಭಾರತ-ಜಪಾನ್ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ

ಹಂಚಿಕೊಳ್ಳಿ

ಮೊಹಾಲಿ
ಗೆಲುವಿನ ನಾಗಾಲೋಟ ಮುಂದುವರಿಸಿರುವ ಹಾಲಿ ಚಾಂಪಿಯನ್ ಭಾರತ `ಹೀರೋ’ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಜಪಾನ್ ಎದುರು ಸೆಣಸಲಿದೆ.

ಆರನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಪ್ರಯತ್ನದಲ್ಲಿರುವ ಭಾರತ ಬುಧವಾರ ಇಲ್ಲಿಯ ಒಲಿಂಪಿಯನ್ ಬಲ್ಬೀರ್‌ಸಿಂಗ್(ಸೀ) ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕೊರಿಯಾ ತಂಡವನ್ನು ೮-೧ ಗೋಲುಗಳಿಂದ ಹಣಿಯಿತು.

ಇದಕ್ಕೂ ಮೊದಲು ಜಪಾನ ಹಾಗೂ ಮಲೇಷ್ಯಾಗಳ ನಡುವೆ ನಡೆದಿದ್ದ ಮೊದಲ ಸೆಮಿಫೈನಲ್ ಪಂದ್ಯ ಪೂರ್ಣಾವಧಿಗೆ ಗೋಲಿಲ್ಲದ ಡ್ರಾ ಕಂಡರೂ ನಂತರ ವಿಜಯಿಗಳ ನಿರ್ಧಾರಕ್ಕಾಗಿ ಅಳವಡಿಸಲಾದ ಪೆನಾಲ್ಟಿ ಶೂಟೌಟ್‌ನಲ್ಲಿ ಜಪಾನ್ ೫-೩ ಗೋಲುಗಳ ಜಯ ಸಾಧಿಸಿತು.

೪ ಹಾಗೂ ೧೩ನೇ ನಿಮಿಷಗಳಲ್ಲಿ ಗೋಲು ಬಾರಿಸಿದ ಶಿಲಾನಂದ ಲಾಕ್ರಾ ಮತ್ತು ೨೧ ಹಾಗೂ ೨೫ನೇ ನಿಮಿಷಗಳಲ್ಲಿ ಯಶ ಕಂಡ ದಿಲ್‌ಪ್ರೀತ್ ಸಿಂಗ್ ಭಾರತದ ಜಯದ ರೂವಾರಿಗಳೆನಿಸಿದರೆ, ನಾಯಕ ಹರ್ಮನ್‌ಪ್ರೀತ್ ಸಿಂಗ್(೯ನೇ ನಿಮಿಷ), ಸುಖ್ಜೀತ್ ಸಿಂಗ್(೨೧ನೇ ನಿಮಿಷ), ಅಂಗದ್ ಬೀರ್ ಸಿಂಗ್(೩೬ನೇ ನಿಮಿಷ) ಹಾಊ ವಿವೇಕ್ ಸಾಗರ್ ಪ್ರಸಾದ(೫೪ನೇ ನಿಮಿಷ) ಭಾರತದ ಪರ ಗೋಲು ಬಾರಿಸಿದ ಇನ್ನಿತರರು.

ಭಾರತ ಹಾಗೂ ಜಪಾನ್‌ಗಳ ನಡುವಿನ ಫೈನಲ್ ಪಂದ್ಯ ಗುರುವಾರ(ನವೆಂಬರ್ ೫) ಭಾರತೀಯ ಕಾಲಮಾನದ ಪ್ರಕಾರ ಸಂಜೆ ೭ಕ್ಕೆ ನಡೆಯಲಿದೆ. ಇದಕ್ಕೂ ಮುನ್ನ ಸಂಜೆ ೪.೩೦ಕ್ಕೆ ಮಲೇಷ್ಯಾ ಹಾಗೂ ಕೊರಿಯಾಗಳು ಕಂಚಿನ ಪದಕಕ್ಕಾಗಿ ಸೆಣಸಾಡಲಿವೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *